ಯಲ್ಲಾಪುರ ತಾಲೂಕಿನ ಮೂಲೆಪಾಲ್ ವ್ಯಾಪ್ತಿಯ ಅರಬೈಲ್ ಘಟ್ಟದ ಡಾಂಬರ್ ರಸ್ತೆಯ ಪಕ್ಕದ ಗಟಾರದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

ಈ ಕುರಿತು ಕೊಡ್ಲಗದ್ದೆಯ ರವಿ ಸಿದ್ದಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಾಖಲಿಸಿದ ದೂರಿನಲ್ಲಿ, ಅ.13ರಂದು ಬೆಳಿಗ್ಗೆ ರೇಷನ್ ತರಲೆಂದು ರವಿ ಸಿದ್ದಿ ಬಸ್ಸಿನಲ್ಲಿ ಗುಳ್ಳಾಪುರದಿಂದ ಯಲ್ಲಾಪುರಕ್ಕೆ ಬರುತ್ತಿದ್ದಾಗ, ಮೂಲೆಪಾಲ್ ವ್ಯಾಪ್ತಿಯ ಅರಬೈಲ್ ಘಟ್ಟದ ಡಾಂಬರ್ ರಸ್ತೆಯ ಪಕ್ಕದ ಗಟಾರದಲ್ಲಿ ವ್ಯಕ್ತಿಯೊಬ್ಬನ ದೇಹ ಬಿದ್ದಿರುವುದನ್ನು ಕಂಡು, ಬಸ್ಸಿನಿಂದ ಇಳಿದು ಹೋಗಿ ನೋಡಿದಾಗ, ಗಟಾರದಲ್ಲಿ ಬಿದ್ದಿದ್ದ ವ್ಯಕ್ತಿಯು ಮೃತಪಟ್ಟಿದ್ದು ಕಂಡುಬಂದಿದೆ.

ವ್ಯಕ್ತಿಯ ದೇಹಕ್ಕೆ ಗಾಯವಾಗಿರುವುದು ಹಾಗೂ ರಕ್ತದ ಕಲೆಗಳು, ಬಾಸುಂಡೆಗಳು ಕಂಡುಬಂದಿವೆ. ಅ.12ರ ರಾತ್ರಿಯಿಂದ ಅ.13ರ ಬೆಳಗಿನ ಅವಧಿಯಲ್ಲಿ ಯಾವುದೋ ಉದ್ದೇಶದಿಂದ ಬಿರುಸಾದ ವಸ್ತುವಿನಿಂದ ಹೊಡೆದು ಗಾಯಗೊಳಿಸಿ, ಕೊಲೆ ಮಾಡಿ ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ರಸ್ತೆ ಪಕ್ಕದ ಗಟಾರದಲ್ಲಿ ಶವವನ್ನು ತಂದು ಹಾಕಿರುವ ಸಂಶಯ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

=====================

Leave a Reply

You cannot copy content of this page