ಮೀನು ಹಿಡಿಯಲು ಬೇಡ್ತಿ ನದಿಗೆ ಹೋಗಿದ್ದ ಇಬ್ಬರು ಯುವಕರು, ವಾಪಸ್ ಬರುವಾಗ ನೀರಿನ ರಭಸಕ್ಕೆ ಕವಲಗಿ ಹಳ್ಳದಲ್ಲಿ ಮುಳುಗಿ ನಾಪತ್ತೆಯಾದ ಘಟನೆ ರವಿವಾರ ನಡೆದಿದೆ.

ರವಿವಾರ ಯಲ್ಲಾಪುರ ತಾಲೂಕಿನ ಮಾದನಸರದ ಗೌಂಡಿ ಕೆಲಸದ ಮಹಮ್ಮದ್ ರಫೀಕ್ ಇಬ್ರಾಹಿಂ ಸಾಬ್ ಸೈಯದ್ ಹಾಗೂ ಕೂಲಿ ಕೆಲಸದ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯದ್ ಎಂಬ ಸಹೋದರರು ತಮ್ಮ ಆರು ಜನ ಸ್ನೇಹಿತರೊಂದಿಗೆ ಕವಲಗಿ ಹಳ್ಳವನ್ನು ದಾಟಿ, ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿದ್ದರು.

ವಾಪಸ್ ಬರುವಾಗ ಕವಲಗಿ ಹಳ್ಳದಲ್ಲಿ ಒಮ್ಮೆಲೇ ನೀರು ಹೆಚ್ಚಾಗಿ ಈ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕಾಣೆಯಾದವರ ಹುಡುಕಾಟ ನಡೆದಿದೆ.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news

E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur

ನಮ್ಮ FACE BOOK GROUP JOIN ಆಗಿ https://www.facebook.com/groups/593852164946589

LATEST NEWS

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading