ಯಲ್ಲಾಪುರ ತಾಲೂಕಿನ ಚಂದಗುಳಿಯ ಸಿದ್ಧಿವಿನಾಯಕ ದೇವಾಲಯದ ಗುರುಭವನದಲ್ಲಿ ಶನಿವಾರ ವೀರಾಂಜನೇಯ ಮಹಿಳಾ ತಾಳಮದ್ದಳೆ ಕೂಟ ಬಿಸಗೋಡ ಇವರಿಂದ ಸುಧನ್ವ ಮೋಕ್ಷ ತಾಳಮದ್ದಳೆ ನಡೆಯಿತು.

ಭಾಗವತರಾಗಿ ನಾಗೇಂದ್ರ ಭಾಗ್ವತ್ ಶೇಡಿಜಡ್ಡಿ, ಮೃದಂಗವಾದಕರಾಗಿ ಸುಬ್ರಹ್ಮಣ್ಯ ಭಟ್ಟ ಚಂದಗುಳಿ ಪಾಲ್ಗೊಂಡಿದ್ದರು. ಪಾತ್ರವರ್ಗದಲ್ಲಿ ಸುಧನ್ವನಾಗಿ ಸುಮಾ ಭಟ್ಟ ಬಿಸಗೋಡ, ಅರ್ಜುನನಾಗಿ ನಯನಾ ಗಣಪೂಮನೆ, ಹಂಸಧ್ವಜನಾಗಿ ಪಾರ್ವತಿ ಕಿಚ್ಚೂಪಾಲ್, ಪ್ರಭಾವತಿಯಾಗಿ ಮೀನಾಕ್ಷಿ ಭಟ್ಟ ಕೆಳಗಿನಪಾಲ, ಕೃಷ್ಣನಾಗಿ ವೀಣಾ ಭಟ್ಟ ವಡ್ರಮನೆ ಪಾತ್ರಚಿತ್ರಣ ನೀಡಿದರು.

ಪ್ರಣವಾನಂದ ಶ್ರೀಗಳು

ಕಳೆದ ಎರಡು ತಿಂಗಳಿನಿಂದ ಚಂದಗುಳಿ ದೇವಾಲಯದ ನೂತನ ಗುರುಭವನದಲ್ಲಿ ತುರುವೇಕೆರೆ ಪ್ರಣವಾನಂದ ಶ್ರೀಗಳ ಚಾತುರ್ಮಾಸ್ಯ ವ್ರತನಿರತರಾಗಿದ್ದು,

ಶೃತಿ ಭಟ್ಟ ಅವರಿಂದ ಶನಿವಾರ ಭಕ್ತಿ ಸಂಗೀತ ನಡೆಯಿತು.

ಈ ನಿಮಿತ್ತ ದೇವಾಲಯದಲ್ಲಿ ಭಕ್ತಿಸಂಗೀತ, ತಾಳಮದ್ದಳೆ, ಹರಿಕೀರ್ತನೆ, ಭಗವದ್ಗೀತಾ ಪಠಣ, ಹಿಮ್ಮೇಳ ವೈಭವ, ಭಜನೆ, ಕುಂಕುಮಾರ್ಚನೆ ಮುಂತಾದ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ನಡೆದಿವೆ.

ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಪ್ರಣವಾನಂದ ಶ್ರೀಗಳ ಪಾದಪೂಜೆ ನಡೆಯಿತು.

ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ ಹಾಗೂ ಸಮೀತಿಯ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading