ಮಾ.8 ಮತ್ತು 9 ರಂದು ಕಾಳಮ್ಮದೇವಿ ದೇವಾಲಯದಲ್ಲಿ ವರ್ಧಂತಿ ಉತ್ಸವ
ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಕಾಳಮ್ಮದೇವಿ ದೇವಾಲಯದಲ್ಲಿ ಮಾ.8 ಮತ್ತು 9 ರಂದು ವರ್ಧಂತಿ ಉತ್ಸವ ನಡೆಯಲಿದೆ. ವರ್ಧಂತಿ ಉತ್ಸವದಆಮಂತ್ರಣ ಪತ್ರಿಕೆಯನ್ನು ಗುರುವಾರ ದೇವಾಲಯದ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.
ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, ಕಾಳಮ್ಮ ದೇವಿ ಹಾಗೂ ಪರಿವಾರ ದೇವರ ಸನ್ನಿಧಿಯಲ್ಲಿ ಮಾ.8 ರವಿವಾರ ಮತ್ತು 9 ಸೋಮವಾರದಂದು ವಾರ್ಷಿಕ ವರ್ಧಂತಿ ಉತ್ಸವ ನಡೆಯಲಿದೆ. ಈ ನಿಮಿತ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮೀತಿಯ ಪ್ರಧಾನ ಕಾರ್ಯದರ್ಶಿ ಸಂಜೀವ ಕುಮಾರ ಹೊಸ್ಕೇರಿ ಮಾತನಾಡಿ, ರವಿವಾರ ಪುಣ್ಯಾಹ, ಬ್ರಹ್ಮಕೂರ್ಚ ಹವನ, ಮಹಾಸಂಕಲ್ಪ, ಗಣಪತಿ ಹವನ ಚಂಡಿಕಾ ಪಾಠ ನಡೆಯಲಿದೆ. ಸೋಮವಾರ ನವಚಂಡಿಕಾ ಹವನ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ, ರವಿವಾರ ರಸಮಂಜರಿ ಹಾಗೂ ಸೋಮವಾರ ರಾತ್ರಿ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು. ಪ್ರಮುಖರಾದ ನವೀನ ನಾಯ್ಕ, ಸಚಿನ ಅಡಿಗೋಳ, ರಮೇಶ ಕಮ್ಮಾರ ಮುಂತಾದವರು ಇದ್ದರು.