ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ, ಶಿರಸಿಯ ನಂ.1 ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಂದನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈಬಾರಿಯ KCET ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಚಂದನ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಶೆಟ್ಟಿ 260 ನೇ ರ‍್ಯಾಂಕ್ (ಅಗ್ರಿ), 253 ರ‍್ಯಾಂಕ್(ಬಿಪಿಟಿ), ಅನನ್ಯ ಭಟ್ಟ, 29ನೇ ರ‍್ಯಾಂಕ್(ಎಂ.ಇ.ಟಿ), ಶ್ರೀನಿಧಿ ಹೆಗಡೆ 1818(ಅಗ್ರಿ), ಇಶಾ ಹುಲೇಕಲ್ 5051 ನೇ ರ‍್ಯಾಂಕ್ (ಬಿಪಿಟಿ), 5052 ನೇ ರ‍್ಯಾಂಕ್( ಡಿ.ಫಾರ್ಮಾ) ಪಡೆದಿದ್ದಾರೆ

ಹಾಗೂ ಮಾನವಿ ಹೆಗಡೆ(5211), ಕೃಷ್ಣ ನಾಯ್ಕ(7275ಇನಗ), ಪ್ರತೀಕ್ಷಾ ಭಟ್ಟ(7593), ನ್ಯಾನ್ಸಿ ವಿಶ್ವಕರ್ಮ(8191), ನಿಖಿತಾ ಭಟ್ಟ(8906), ದಿಶಾ ರಾಯ್ಸದ್(10255) ಮಂಥನ ಕಾಮತ್(14301), ಸಾತ್ವಿಕ್ ಹೆಗಡೆ(16800), ಪೃಥ್ವಿ ಶೆಟ್ಟಿ(17021) ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಈ ಕಾಲೇಜಿನ ವಿದ್ಯಾರ್ಥಿಗಳು ಬೋಡ್ರ್ಸ್, ಸಿಇಟಿ, ನೀಟ್, ಜೆಇಇ ಪರೀಕ್ಷಾ ಫಲಿತಾಂಶದಲ್ಲಿಯೂ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಎಲ್ಲ ಸಾಧಕ ವಿದ್ಯಾರ್ಥಿಗಳಿಗೆ ಚಂದನ ಕಾಲೇಜಿನ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಅಧ್ಯಾಪಕರು, ಸಿಬ್ಬಂದಿಗಳು ಶುಭಕೋರಿದ್ದಾರೆ.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading