ಪ್ರತ್ಯೇಕ ಎರಡು ಪ್ರಕರಣಗಳಲ್ಲಿ, ಅಪ್ರಾಪ್ತ ಬಾಲಕರಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದ ಬೈಕ್ ಮಾಲೀಕರಿಗೆ ತಲಾ 25 ಸಾವಿರ ರೂ ದಂಡ ವಿಧಿಸಲಾಗಿದೆ.

ಕಲಘಟಗಿಯ ಬಾಬು ರಾವ್ ಯಲ್ಲಾಪುರಕರ್ ಹಾಗೂ ಕಲಘಟಗಿಯ ರಾಮಣ್ಣಾ ಕಲ್ಯಾಣಕರ್ ಅವರು ಅಪ್ರಾಪ್ತ ಬಾಲಕರಿಗೆ ಬೈಕ್ ಅನ್ನು ಚಲಾಯಿಸಲು ನೀಡಿದ್ದರು.

ಯಲ್ಲಾಪುರ ಪೊಲೀಸರು ಕಿರವತ್ತಿ ಚೆಕ್ ಪೋಸ್ಟ್ ಸಮೀಪ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೈಕ್ ಚಲಾಯಿಸುತ್ತಿದ್ದ ಬಾಲಕರನ್ನು ತಡೆದು, ಪ್ರಕರಣ ದಾಖಲಿಸಿದ್ದರು. ಈ ಬಾಲಕರು ಕಿರವತ್ತಿ ಕಡೆಯಿಂದ ಕಲಘಟಗಿ ಕಡೆಗೆ ಬೈಕ್ ಚಲಾಯಿಸಿಕೊಂಡುಹೋಗುತ್ತಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಬೈಕ್ ಮಾಲೀಕರಿಗೆ ತಲಾ 25 ಸಾವಿರ ರೂ ದಂಡ ವಿಧಿಸಿದೆ. ಈ ಎರಡೂ ಪ್ರಕರಣಗಳನ್ನು ಪಿಎಸ್ಸೈ ಸಿದ್ದಪ್ಪ ಗುಡಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading