ಯಲ್ಲಾಪುರ: ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ 22 ನೇ ವಾರ್ಷಿಕೋತ್ಸವ ಜೂ.13 ರಂದು ಸಂಜೆ 7 ಕ್ಕೆ ಆನಗೋಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ.

ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಹೆಗಡೆ ಮಳಗಿಮನೆ ಅಧ್ಯಕ್ಷತೆ ವಹಿಸಲಿದ್ದು, ರವೀಂದ್ರನಗರದ ಶಕ್ತಿ ಗಣಪತಿ ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ ಕಂಚೀಪಾಲ ಉದ್ಘಾಟಿಸಲಿದ್ದಾರೆ. ಆನಗೋಡ ಸಹಕಾರಿ ಸಂಘದ ಅಧ್ಯಕ್ಷ ಎನ್. ಕೆ.ಭಟ್ಟ ಅಗ್ಗಾಶಿಕುಂಬ್ರಿ, ಸುದರ್ಶನ ಸೇವಾ ಟ್ರಸ್ಟ್ ಅಧ್ಯಕ್ಷ ಗಣಪತಿ ಮಾನಿಗದ್ದೆ, ಯಕ್ಷ ಗುರುಗಳಾದ ಅನಂತ ಹೆಗಡೆ ದಂತಳಿಗೆ, ಸದಾಶಿವ ಭಟ್ಟ ಮಲವಳ್ಳಿ, ನರಸಿಂಹ ಭಟ್ಟ ಹಂಡ್ರಮನೆ ಭಾಗವಹಿಸಲಿದ್ದಾರೆ.

ಟ್ರಸ್ಟ್ ನ ಯಕ್ಷಗಾನ ತರಬೇತಿ ವರ್ಗದ ವಿದ್ಯಾರ್ಥಿಗಳಿಂದ ಯಕ್ಷಗಾನದ ಪೂರ್ವರಂಗ ಪ್ರದರ್ಶನ ಮತ್ತು ಧಮಾರ್ಂಗದ ದಿಗ್ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಅನಂತ ಹೆಗಡೆ, ನರಸಿಂಹ ಭಟ್ಟ, ಪ್ರಮೋದ ಕಬ್ಬಿನಗದ್ದೆ, ಗಣೇಶ ಗಾಂವ್ಕರ ಶೆಳೆಮನೆ, ಚಿನ್ಮಯ ಹೆಗಡೆ ದಂತಳಿಗೆ ಭಾಗವಹಿಸಲಿದ್ದಾರೆ.

ಶ್ರೀಧರ ಅಣಲಗಾರ, ರಾಮ ಗೌಡ, ಗಂಗಾಧರ ಗೌಡ, ಮಂಜುನಾಥ ಗಾಂವ್ಕರ ಬಳಗಾರ, ಆದರ್ಶ ಭಟ್ಟ ಈರಾಪುರ, ಶ್ರೀವತ್ಸ ಭಟ್ಟ ಬಟ್ಲಗುಂಡಿ, ಮಾನಸಾ ನಾಯ್ಕ, ಅನನ್ಯ ಭಟ್ಟ, ಪೂರ್ವಿಕಾ ಭಾಗ್ವತ, ಶ್ರೀಪ್ರಭಾ ಭಾಗ್ವತ, ವೈಷ್ಣವಿ ನಾಯ್ಕ, ಸಾನ್ವಿ ಗಾಂವ್ಕರ, ವಿನಾಯಕ ಭಟ್ಟ, ದರ್ಶನ ಗಾಂವ್ಕರ, ಮನೋಜ ಕುಣಬಿ, ಅಚ್ಯುತ ಗಾಂವ್ಕರ, ಅಭಿನವ ಮೆಣಸುಮನೆ, ಪ್ರಣತಿ ಆಚಾರಿ, ಪ್ರಭಾತ ಭಟ್ಟ, ಮಹಾಲಕ್ಷ್ಮಿ ಸಿದ್ದಿ, ಆಯುಷಿ ಗಾಂವ್ಕರ, ಚೇತನ ಭಾಗ್ವತ ಮುಮ್ಮೇಳದಲ್ಲಿ ಭಾಗವಹಿಸಲಿದ್ದಾರೆ.

===============================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading