ಯಲ್ಲಾಪುರ ತಾಲೂಕಿನ ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಶಾಲೆಗೆ ಹಾಜರಾಗುವ ಮಕ್ಕಳನ್ನು ಶಾಲೆಯ ಮುಖ್ಯ ದ್ವಾರದಲ್ಲಿ ಕಾರ್ಟೂನ್ ಚಿತ್ರಗಳು ಮತ್ತು ವಿವಿದ ಯೋಜನೆಯನ್ನು ಪ್ರತಿಬಿಂಬಿಸುವ ಪಾತ್ರ ಧರಿಸಿದ ಮಕ್ಕಳನ್ನು ಹೂವಿನ ದಳಗಳನ್ನು ಹಾಕುತ್ತ ಮತ್ತು ಸಿಹಿಯನ್ನು ನೀಡುತ್ತ ಮುಖ್ಯಾದ್ಯಾಪಕಿ ಸಾಹಿತಿ ಶಿವಲೀಲಾ ಹುಣಸಗಿ ಹಾಗೂ ಸಹಶಿಕ್ಷಕಿ ವೀಣಾ ದೇವಾಡಿಗ ಬರಮಾಡಿಕೊಂಡರು.

ವಿನೂತನ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಆಹ್ವಾನಿಸಲಾಯಿತು. ನನ್ನ ಕನಸಿನ ಗೋಡೆ ಯಲ್ಲಿ ಮಕ್ಕಳು ಈ ಶೈಕ್ಷಣಿಕ ವರ್ಷದಲ್ಲಿ ತಾವು ಕಂಡ ಕನಸನ್ನು ಬರೆಯುವುದು ಮತ್ತು ಚಿತ್ರ ಅಂಟಿಸುವುದರ ಮ?ಲಕ ತಮ್ಮ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಸುವ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು ಮತ್ತು ನನ್ನ ಕನಸಿನ ರೆಕ್ಕೆ ಯೆಂಬ ಚಿತ್ರವಿರುವ ಪೆÇೀಟೋ ಶೂಟ್ ಮಾಡುವ ಮೂಲಕ ಮಕ್ಕಳು ಖುಷಿಯಿಂದಲಾ ಭಾಗವಹಿಸಿದ್ದರು.ಇದೇ ಸಮಯದಲ್ಲಿ ಪಾಲಕರಿಗೆ ಕೃತಜ್ಞತಾ ಪತ್ರ ನೀಡುವ ಮೂಲಕ ಪಾಲಕರಿಗೆ ತಮ್ಮ ಮಗುವಿನ ಸುರಕ್ಷತೆಗೆ ಶಿಕ್ಷಕರು ಬದ್ಧ ಎಂಬ ಕಾರ್ಡ್ ನೀಡಿ ಗೌರವಿಸಲಾಯಿತು.

ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಶಶಿಧರ ಮೂರಸಾವಿರಪ್ಪ ಕೊರವಿ ಉಣಕಲ್ ನ ಕೊರವಿ ಡೆವಲಪ್ಪರ್ಸ್ ಮತ್ತು ಬಿಲ್ಡರ್ಸ್ ನ ಇವರು ಶಾಲಾ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಿಸಿದರು. ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿ ಶಾಲಾ ಪ್ರಾರಂಭೋತ್ಸವದ ಕುರಿತು ಮತ್ತು ಪೆÇೀಷಕರ ಮಹಾಸಭೆಯ ಮಹತ್ವಾಕಾಂಕ್ಷೆಯ ಬಗ್ಗೆ ಮಾತನಾಡುತ್ತ ಸರಕಾರಿ ಶಾಲೆಗಳಲ್ಲಿ ನೀಡುವ ಸೌಲಭ್ಯಗಳನ್ನು ವಿವರಿಸಿ ಅಕ್ಷರದಾಸೋಹ, ಕ್ಷೀರಭಾಗ್ಯ, ರಾಗಿಮಾಲ್ಟ್, ವಿಶೇಷ ಭೋಜನ, ಮೊಟ್ಟೆ, ಬಾಳೆಹಣ್ಣು, ಉಚಿತ ಆರೋಗ್ಯ ತಪಾಸಣೆ ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಮ್ಮಿಕೊಳ್ಳುವ

ಗುಣಾತ್ಮಕ ಚಟುವಟಿಕೆಗಳು ಮಕ್ಕಳ ಪ್ರಗತಿಗೆ ನಾವೀನ್ಯ ಕಲಿಕೆಯ ನಲಿಕಲಿ,ಸ್ಮಾರ್ಟ್ ಕ್ಲಾಸ್, ಶೈಕ್ಷಣಿಕ ಪ್ರವಾಸಗಳು, ವಾರ್ಷಿಕ ಸ್ಮೇಹಸಮ್ಮಿಲನಗಳು ಎಲ್ಲವೂ ಕಾರಣವಾಗುತ್ತದೆ. ಇಲ್ಲಿ ನುರಿತ ಶಿಕ್ಷಕರ ಬಣವಿದೆ. ಮಕ್ಕಳಿಗೆ ಶಿಸ್ತಿನ ಜೊತೆಗೆ ಕ್ರೀಡೆಗೆ, ಸೃಜನಾತ್ಮಕ ಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪಾಲಕರೂ ಶಿಕ್ಷಕರೊಂದಿಗೆ ಸಹಕಾರ ನೀಡುತ್ತ ಮಗುವಿನ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿದಂತೆ ಆಗುತ್ತದೆ ಸರಕಾರಿ ಶಾಲೆಯನ್ನು ಉಳಿಸುವತ್ತ ಪಾಲಕರು ಪೆÇೀಷಕರು ಹೆಚ್ಚು ಗಮನಹರಿಸಬೇಕೆಂದು ಕೋರಿದರು.

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ.ಉಪಾಧ್ಯಕ್ಷ ಗುರುರಾಜ ಆಚಾರಿ ವಹಿಸಿದ್ದರು. ಅತಿಥಿಗಳಾಗಿ ಭಾರತಿ ಮರಾಠಿ, ಅನಿತಾ ರಂಗೈಶೇಣ್ವಿ,ಲೋಕೇಶ ಮರಾಠೆ, ಶಂಕರ ನಾಯಕ ಕೊರವಿ ಡೆವಲಪರ್ ಹುಬ್ಬಳ್ಳಿ. ನಾಗರಾಜ ಭಟ್ಟ, ಅಶ್ವಿನಿ ಭಟ್ಟ,ಗೀತಾ ಸಿದ್ದಿ, ಪ್ರಭಾವತಿ, ಪ್ರೀಯಾ
ಪ್ರೇಮಾ ನಾಯ್ಕ, ಮಂಗಲಾ ಸಿದ್ದಿ, ತ್ರೇಷಾ ನೋಹಾ ಉಪಸ್ಥಿತರಿದ್ದರು. ನಿರೂಪಣೆ, ವಂದನಾರ್ಪಣೆಯನ್ನು ಸಹಶಿಕ್ಷಕರಾದ ವೀಣಾ ದೇವಾಡಿಗ ನೆರವೇರಿಸಿದರು.ಸಿಹಿಯೂಟದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು..

===========================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading