ದೇವಾಲಯದಲ್ಲಿದ್ದ ಕಾಣಿಕೆ ಡಬ್ಬಿಯನ್ನು, ಕಾಣಿಕೆ ಹಣದ ಸಮೇತವಾಗಿ ಕಳ್ಳರು ಕದ್ದೊಯ್ದ ಘಟನೆ ಯಲ್ಲಾಪುರ ತಾಲೂಕಿನ ಸೋಮಾಪುರದಲ್ಲಿ ನಡೆದಿದೆ.

ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಕಂಚನಳ್ಳಿ ಗ್ರಾಮದ ಸೋಮಾಪುರದ ದ್ಯಾಮವ್ವ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ ನಡೆದಿದೆ.

ಮೇ.29ರಂದು ಸಂಜೆ 6.30 ಗಂಟೆಯಿಂದ ಜೂ.2ರ ಬೆಳಿಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ದ್ಯಾಮವ್ವ ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿಯನ್ನು ಹಾಗೂ ಹುಂಡಿಯಲ್ಲಿದ್ದ ಅಂದಾಜು 50 ಸಾವಿರ ರೂ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ.

ಕಳ್ಳರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ್ಯಾಮವ್ವ ದೇವಸ್ಥಾನದ ಅರ್ಚಕ ಶ್ರೀಕಾಂತ ಅಪ್ಪಾರಾವ್ ಮಿರಾಶಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

===================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading