ಉತ್ತರಕ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಹಲವು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ನೂತನ ಆ್ಯಪ್ ಲೋಕಾರ್ಪಣೆ ಹಾಗೂ ಕಂಪನಿಯ ಉದ್ಘಾಟನಾ ಸಮಾರಂಭವು ಶನಿವಾರ ಸಂಜೆ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ನಡೆಯಿತು.

ಕಂಪನಿಯ ಫೌಂಡರ್ ಕುಮಾರ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಇಂದು ಲೋಕಾರ್ಪಣೆಗೊಂಡ ಈ ನೂತನ ಮೋಬೈಲ್ ಆ್ಯಪ್ ಸೇವಾ ಕ್ಷೇತ್ರದ ಕೆಲಸಗಾರರ ಮೂಲಕ ಅಗತ್ಯ ಸೇವೆಯನ್ನು ಮನೆ ಬಾಗಿಲಿಗೆ ಸೇವೆ ಒದಗಿಸುವ ಕಾರ್ಯವನ್ನು ಮಾಡುತ್ತದೆ. ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಇದು ಉತ್ತಮ ಸೇವಾ ಆ್ಯಪ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಹೊಸ ಪ್ರಯತ್ನಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಬಾಲಕೃಷ್ಣ ನಾಯಕ ಮಾತನಾಡಿ, ಯಲ್ಲಾಪುರದಂತಹ ಚಿಕ್ಕಊರಿನಲ್ಲಿ. ಉತ್ತಮಕಾರ್ಯಕ್ಕೆ ಕೈ ಹಾಕಿರುವುದು ಶ್ಲಾಘನೀಯ. ಈ ಆಲೋಚನೆ ಮುಂದಿನ ಜನಾಂಗಕ್ಕೆ ತೀರಾ ಹೆಚ್ಚು ಉಪಯೋಗವಾಗಲಿದೆ. ಎಲ್ಲರಿಗೂ ಉಪಯೋಗವಾಗಲಿ. ಸೇವಾ ಕ್ಷೇತ್ರದಲ್ಲರುವವರಿಗೆ ಉದ್ಯೋಗ ಹಾಗೂ ಸೇವೆಯನ್ನು ಬಯಸುವವರಿಗೆ ಸೇವೆ ಎರಡೂ ಈ ಆ್ಯಪ್ ನಿಂದ ದೊರೆಯಲಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಬ್ರೋಡ್ ವೇ ಕಮ್ಯುನಿಕೇಶನ್ ಸಂಸ್ಥೆಯ ಜಿ.ಎಸ್.ಹೆಗಡೆ ಮಾತನಾಡಿ, ಇಂದು ನಾವು ಹತ್ತು ಹಲವಾರು ಆ್ಯಪ್ ಗಳನ್ನು ನಾವು ನೋಡುತ್ತಿದ್ದೇವೆ ಅವರ ಸೇವಾ ತತ್ಪರತೆ, ಪರಿಶ್ರಮ ಮೇಲಕ್ಕೆ ಕರೆದೊಯ್ದಿದೆ. ಸೇವಾ ಜ್ಷೇತ್ರಕ್ಕೆ ಆಧ್ಯತೆ ನೀಡುವ ಈ ಆ್ಯಪ್ ಜನರ ಮನ, ಮನೆ ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ.

ಆರಂಭಿಸುವುದು ಸುಲಭ, ಯಶಸ್ಸು ತುಂಬಾ ಕಷ್ಠ. ನಿರಂತರ ಪರಿಶ್ರಮ ಹಾಗೂ ಉತ್ತಮ ಸೇವೆ ನೀಡುವ ಕೆಲಸಗಾರರು, ನಿತಮಿತ ದರದ ಸೇವೆ ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಗ್ರಾಹಕರಿಂದ ದೂರು ಬಂದಲ್ಲಿ ಅದಕ್ಕೆ ಶೀಘ್ರ ಸ್ಪಂದನೆ ಅಗತ್ಯ ಎಂದರು.

ಕೋ-ಫೌಂಡರ್ ನಾರಾಯಣ ಹೆಗಡೆ ಆ್ಯಪ್ ನ ಕಾರ್ಯವಿಧಾನವನ್ನು ಪರಿಚಯಿಸಿದರು.
ಕಂಪನಿಯ ನಾಗರಾಜ ಹೆಗಡೆ, ಮೂರ್ತಿ ಹೆಗಡೆ ಉಪಸ್ಥಿತರಿದ್ದರು. ವೈಷ್ಣವಿ ಸಂಗಡಿಗರು ಪ್ರಾರ್ಥಿಸಿದರು. ವಾಣಿಶ್ರೀ ಹೆಗಡೆ ಸ್ವಾಗತಿಸಿದರು. ಸುರೇಶ ಗೌಡ ನಿರೂಪಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading