ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಶ್ರೀಲಕ್ಷ್ಮೀನರಸಿಂಹ ದೇವಾಲಯ
ನಂಬಿಬಂದ ಭಕ್ತರ ಅಭೀಷ್ಟಗಳನ್ನು ಈಡೇರಿಸುವ ದೇವಾಲಯ ಎಂದೇ ಪ್ರಸಿದ್ಧಿಯಾದ ಯಲ್ಲಾಪುರ ತಾಲೂಕಿನ ವಾಗಳ್ಳಿಯ ಶ್ರೀಲಕ್ಷ್ಮೀನರಸಿಂಹ ದೇವಾಲಯವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.
ನಿತ್ಯ, ನೈಮಿತ್ತಿಕವಾದ ಅನೇಕ ಧಾರ್ಮಿಕ ಆಚರಣೆಗಳು, ಪೂಜೆ, ಪ್ರಾರ್ಥನೆಗಳು ಈ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ. ವಾರ್ಷಿಕವಾಗಿ ಹಲವು ಧಾರ್ಮಿಕ ಕೈಂಕರ್ಯಗಳು ಈ ದೇವಾಲಯದಲ್ಲಿ ನಡೆಯುತ್ತಿವೆ. ಲಕ್ಷ ತುಳಸಿ ಅರ್ಚನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ.
ಆಗಮೋಕ್ತವಾದ ವಿಧಿ ವಿಧಾನಗಳು ಇಲ್ಲಿ ನಡೆಯುತ್ತಿವೆ. ಅನೇಕ ಶತಮಾನಗಳ ಇತಿಹಾಸ ಈ ದೇವಾಲಯಕ್ಕೆ ಇದೆ. ಪೂಜ್ಯ ಸ್ವರ್ಣವಲ್ಲಿ ಹಿರಿಯ ಶ್ರೀಗಳ ಅಮೃತ ಹಸ್ತದಿಂದ ಶ್ರೀದೇವರ ಪುನರ್ ಪ್ರತಿಷ್ಠೆ ನಡೆದಿದೆ.
ನಂಬಿಬಂದ ಭಕ್ತರನ್ನು ಪೊರೆಯುವ ಲಕ್ಷ್ಮೀನರಸಿಂಹ ದೇವರು ವಾಗಳ್ಳಿಯ ಶ್ರೀಲಕ್ಷ್ಮೀನರಸಿಂಹ ದೇವರ ಸನ್ನಿಧಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಭಕ್ತರ ಅಭಿಷ್ಟಗಳು ಈಡೇರುತ್ತವೆ ಎಂಬ ಪ್ರತೀತಿ ಇದೆ.
ಹೀಗಾಗಿ ಅನೇಕ ಭಕ್ತರು ಶ್ರೀದೇವರ ಸನ್ನಿಧಿಯಲ್ಲಿ ಹರಕೆಹೊತ್ತು, ನಾನಾ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ.