ಸಿದ್ದಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಉರ್ದು ಶಾಲೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು ಈಗಾಗಲೇ 22 ಲಕ್ಷ ರೂ ವೆಚ್ಚದಲ್ಲಿ ಸರ್ಕಾರ ತಡೆಗೋಡೆಯನ್ನು ನಿರ್ಮಿಸಲು ಹೊರಟಿದೆ. ಕಟ್ಟಡ ಅಭದ್ರವಾಗಿರುವ ಕಾರಣ ತಡೆಗೋಡೆ ನಿರ್ಮಿಸಿದಂತೆ ಸಿದ್ದಾಪುರ ಬಿಜೆಪಿ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಲಾಯಿತು.

ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಬಾರದು ಆ ಜಾಗವನ್ನು ಸಿದ್ದಾಪುರ ಸಂತೆ ಮಾರುಕಟ್ಟೆಯಾಗಿ ಪರಿವರ್ತನೆ ಮಾಡಬೇಕು, ಈÁಗಲೇ ಆ ಜಾಗದಲ್ಲಿ ಶಾಲೆ ನಡೆಯುತ್ತಿಲ್ಲ, ಮತ್ತೆ ಅದೇ ಜಾಗದಲ್ಲಿ ಪ್ರಾರಂಭಿಸುವ ಅವಶ್ಯಕತೆ ಇಲ್ಲ,
ಶಾಲಾ ಮಕ್ಕಳನ್ನು ಬೇರೆಡೆಗೆ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಬೇಕು, ಒಂದುವೇಳೆ ತಡೆಗೋಡೆ ನಿರ್ಮಿಸಿ ಶಾಲೆ ಪ್ರಾರಂಭಿಸಿ ಏನಾದರೂ ಅನಾಹುತಗಳು ನಡೆದರೆ ಅದಕ್ಕೆ ಸ್ಥಳೀಯ ಶಾಸಕರು, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು, ತಹಸೀಲ್ದಾರ್ ರು ನೇರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಪ್ರತಿಭಟನೆಕಾರರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ತೋಟಪ್ಪ ನಾಯ್ಕ್, ಅನಂತಮೂರ್ತಿ ಹೆಗಡೆ, ನಂದನ್ ಬೋಕರ್, ಮಾರುತಿ ನಾಯ್ಕ್ ಹೊಸೂರ್ ಮುಂತಾದವರು ಮಾತನಾಡಿ ವಿರೋಧ ವ್ಯಕ್ತಪಡಿಸಿದರು.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading