ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಯಲ್ಲಾಪುರ ತಾಲೂಕಿನ ಸುಣಜೋಗಿನಲ್ಲಿ ನಡೆದಿದೆ.

ಸುಣಜೋಗಿನ 20 ವರ್ಷದ ಹೋಂ ನರ್ಸಿಂಗ್ ವೃತ್ತಿಯ ದಯಾನಂದ ನಾಗಪ್ಪ ಸಿದ್ದಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವನು ಮೂರು ತಿಂಗಳಿನಿಂದ ಮನೆಗೆ ಬಂದಿದ್ದನು. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು, ಮಾನಸಿಕವಾಗಿ ನೊಂದುಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡು

ಬುಧವಾರ ಮಧ್ಯಾಹ್ನ 12.15 ಗಂಟೆಯಿಂದ ಗುರುವಾರ ಬೆಳಿಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಸುಣಜೋಗಿನ ತನ್ನ ಮನೆಯ ಜಂತಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಈತನ ಸಾವಿನಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮೃತ ಯುವಕನ ತಂದೆ ಸುಣಜೋಗಿನ ನಾಗಪ್ಪ ಸುಬ್ಬಾ ಸಿದ್ದಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading