ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಕಂಟೇನರ್ ಲಾರಿಯೊಂದು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನು ಕಂಟೇನರ್ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಇಡಗುಂದಿಯಲ್ಲಿ ಬುಧವಾರ ನಡೆದಿದೆ.
ಆರೋಪಿ ಕಂಟೇನರ್ ಲಾರಿ ಚಾಲಕ ಉತ್ತರಪ್ರದೇಶದ ಅಲಹಾಬಾದ್ ನ ಧರ್ಮೆಂದರ ಕುಮಾರ್ ತಂದೆ ರಜಿತ್ ಲಾಲ್ ಎಂಬಾತ ತನ್ನ ಕಂಟೇನರ್ ಲಾರಿಯನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಇಡಗುಂದಿ ಹಾಲಿನ ಡೈರಿ ಹತ್ತಿರ ಒಂದು ಬೈಕ್ ಅನ್ನು ಓವರ್ ಟೇಕ್ ಮಾಡಿಕೊಂಡುಹೋಗಿ, ನಂತರ ಇನ್ನೊಂದು ಬೈಕ್ ಅನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿ,
ಲಾರಿಯನ್ನು ಬಲಭಾಗದಿಂದ ಒಮ್ಮೆಲೇ ಎಡಭಾಗಕ್ಕೆ ಚಲಾಯಿಸಿದ ಪರಿಣಾಮ ಲಾರಿಯ ಎಡಭಾಗವು ಬೈಕಿನ ಹ್ಯಾಂಡಲ್ ಗೆ ತಾಗಿ, ಬೈಕ್ ಚಲಾಯಿಸುತ್ತಿದ್ದ ಯಲ್ಲಾಪುರ ತಾಲೂಕಿನ ದೋಣಗಾರಿನ 21 ವರ್ಷದ ಹರೀಶ ತಂದೆ ಭೂಪತಿ ಸಿದ್ದಿ
ಲಾರಿಯ ಚಕ್ರದ ಕೆಳಗೆ ಬಿದ್ದಾಗ ತಲೆಯ ಮೇಲೆ ಲಾರಿ ಹರಿದು, ಹರೀಶ ಸಿದ್ದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಲಾರಿ ಚಾಲಕ ಧರ್ಮೆಂದರ್ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಇಡಗುಂದಿಯ ಸುರೇಶ ಗಣಪಾ ಸಿದ್ದಿ ದೂರು ದಾಖಲಿಸಿದ್ದಾರೆ. ಘಟನೆಯಲ್ಲಿ ಬೈಕ್ ಜಕಂಗೊಂಡಿದೆ.