ಯಲ್ಲಾಪುರ ಪಟ್ಟಣದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ, ಉತ್ತರಕನ್ನಡ ಜಿಲ್ಲೆಯಾದ್ಯಂತ 10 ಶಾಖೆಗಳನ್ನು ಹೊಂದಿರುವ ಯು.ಕೆ.ಸೌಹಾರ್ದ ಸಹಕಾರಿ ಸಂಘವು 2025-26 ನೇ ಸಾಲಿನಲ್ಲಿ 1.14 ಕೋಟಿ ರೂ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದ್ದಾರೆ.

ಅವರು ಶನಿವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಘವು 25 ವರ್ಷಗಳನ್ನು ಪೂರೈಸಿ 26 ನೇ ವರ್ಷಕ್ಕೆ ಕಾಲಿಟ್ಟಿದೆ. ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಪಥದಲ್ಲಿ ಸಾಗುತ್ತಿದೆ. ಸಂಘವು 22388 ಶೇರು ಸದಸ್ಯರನ್ನು ಹೊಂದಿದ್ದು, 200 ಕೋಟಿ ರೂ ಠೇವಣಿ ಸಂಗ್ರಹಿಸಿದೆ.

ಒಟ್ಟೂ 4484 ಗ್ರಾಹಕರಿಗೆ 150.21 ಕೋಟಿ ರೂ ಸಾಲವನ್ನು ವಿತರಿಸಲಾಗಿದೆ. ಶೇ.92.82ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಸಂಘವು ವಿವಿಧ ಬ್ಯಾಂಕುಗಲ್ಲಿ 53 ಕೋಟಿ ರೂ ಠೇವುಗಳನ್ನು ಗುಂತಾಯಿಸಿದೆ. ಸಂಘವು ಸ್ವಂತ ಕಟ್ಟಡ ಹಾಗೂ ಖಾಲಿ ಸ್ಥಳವನ್ನು ಖರೀದಿಸಿದೆ ಎಂದ ಅವರು ಮುಂದಿನ ದಿನಗಳಲ್ಲಿ ನಮ್ಮ ಸಂಘವು ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂದರು. ಸಂಘದ ಉಪಾಧ್ಯಕ್ಷ ಸುಬ್ಬಯ್ಯ ಧೋಗಳೆ, ಸಲಹೆಗಾರ ಪಿ.ಜಿ.ಹೆಗಡೆ, ಪ್ರಧಾನ ವ್ಯವಸ್ಥಾಪಕ ಎನ್.ಜಿ.ಕಿರಣ ಇದ್ದರು.

=====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading