







ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ ಉನ್ನತೀಕರಿಸಿದ ವಸತಿ ಶಾಲೆ ಬೆಳಸೆ ಅಂಕೋಲಾ, ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ಕಲ್ಲಿ, ಶಿರಸಿ, ಮೊರಾರ್ಜಿ ದೇಸಾಯಿ ಉನ್ನತೀಕರಿಸಿದ ವಸತಿ ಶಾಲೆ ಕರಗಿನಕೊಪ್ಪ ಮುಂಡಗೋಡ ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮದನಳ್ಳಿ, ಹಳಿಯಾಳದಲ್ಲಿ 2026-27ನೇ ಸಾಲಿಗೆ ಖಾಲಿ ಉಳಿದಿರುವ ಅತಿಥಿ ಉಪನ್ಯಾಸಕರನ್ನು ಜಿಲ್ಲಾ ಮಟ್ಟದ ಸಮಿತಿಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಮಾಡಿಕೊಳ್ಳಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ವಿವರ:
ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ಕಲ್ಲಿ, ಶಿರಸಿಯಲ್ಲಿ ಕನ್ನಡ, ಇಂಗ್ಲೀಷ್, ರಾಸಾಯನಿಕಶಾಸ್ತ್ರ ವಿಷಯಗಳ ತಲಾ 1, ಕಿತ್ತೂರು ರಾಣಿ ಚೆನ್ನಮ್ಮ ಉನ್ನತೀಕರಿಸಿದ ವಸತಿ ಶಾಲೆ ಬೆಳಸೆ, ಅಂಕೋಲಾ, ಮೊರಾರ್ಜಿ ದೇಸಾಯಿ ಉನ್ನತಿಕರಿಸಿದ ವಸತಿ ಶಾಲೆ ಕರಗಿನಕೊಪ್ಪ, ಮುಂಡಗೋಡ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮದನಳ್ಳಿ, ಹಳಿಯಾಳದಲ್ಲಿ ಕನ್ನಡ, ಇಂಗ್ಲೀಷ್, ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ ವಿಷಯಗಳಿಗೆ ತಲಾ 1 ಹುದ್ದೆಗಳಿಗೆ ಅರ್ಜಿ ಸಲ್ಲಿಸಬುಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಸ್ನಾತಕೋತ್ತರ ಪದವಿಯೊಂದಿಗೆ ಬಿ.ಎಡ್ ಉತ್ತೀರ್ಣವಾಗಿರಬೇಕು, ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸಲು ಸಮರ್ಥರಿರಬೇಕು, ಅತಿಥಿ ಶಿಕ್ಷಕರಿಗೆ ಮಾಸಿಕ 18,150 ಗೌರವ ಧನ ನೀಡಲಾಗುವುದು, ವಸತಿ ಶಾಲೆಯಾಗಿರುವುದರಿಂದ S.T.I ಕಾರ್ಯನಿರ್ವಹಿಸಬೇಕು. ವೈಯಕ್ತಿಕ ಮಾಹಿತಿ ಮತ್ತು ಅರ್ಜಿಯನ್ನು ಮೇ 31 ರೊಳಗಾಗಿ ಸಲ್ಲಿಸಬಹುದಾಗಿದೆ.
ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಮಹಾತ್ಮ ಬಾ ಪುಲೆ ವಸತಿ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಜಿಲ್ಲಾ ಮಟ್ಟದ ಸಮಿತಿಯ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ವಸತಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
ಇಂದಿರಾ ಗಾಂಧಿ ವಸತಿ ಶಾಲೆ ಸಾಂಬ್ರಾಣಿ, ಪಾಳಾ, ಮದನಕಲ್, ಮಂಕಿ, ಬೆಳಸೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮದನಹಳ್ಳಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮುರ್ಕವಾಡ, ಹುಲೇಕಲ್, ಅಳ್ಳಂಕಿ, ಕೂಜಳ್ಳಿ, ಬಾಡ, ಕಿನ್ನರ, ಬಾಸಗೋಡ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಾಣಸಗೇರಿ, ಜೋಯಿಡಾ, ಉದ್ಯಮನಗರ, ಶೇಡಬೇರಿ, ಹೆಗಡೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ರಾಮನಗರ, ಕಾವಂಚೂರು, ಶೇಡೆಬೇರಿ, ಗಂಗೆಕೊಳ್ಳ, ಮಹಾತ್ಮ ಬಾ ಪುಲೆ ವಸತಿ ಶಾಲೆ ಕುಂಬಾರವಾಡ,
ಮೊರಾರ್ಜಿ ದೇಸಾಯಿ ಉನ್ನತೀಕರಣ ವಸತಿ ಶಾಲೆ ಕರಗಿನಕೊಪ್ಪ, ಕಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ಉನ್ನತೀಕರಣ ವಸತಿ ಶಾಲೆ ಬೆಳಸೆ, ನಾರಾಯಣ ಗುರು ವಸತಿ ಶಾಲೆ ಜಾಲಿಯಲ್ಲಿ ಖಾಲಿ ಇರುವ ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ, ಕಂಪ್ಯೂಟರ್ ಸೈನ್ಸ್ ವಿಷಯಗಳ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಜೂ.4ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆದಿರಬೇಕು, ಬಿ.ಇಡಿ ಶಿಕ್ಷಣ ಪಡೆದಿರಬೇಕು, ಟಿ.ಇ.ಟಿ ಉತ್ತೀರ್ಣವಾಗಿರಬೇಕು, ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಸಮರ್ಥರಿರಬೇಕು, ಅತಿಥಿ ಶಿಕ್ಷಕರಿಗೆ ಮಾಸಿಕ ರೂ.16,650 ಗೌರವ ಧನ ನೀಡಲಾಗುವುದು, ವಸತಿ ಶಾಲೆಯಾಗಿರುವುದರಿಂದ ಎಸ್.ಟಿ.ಐ ಕಾರ್ಯನಿರ್ವಹಿಸಬೇಕು.

========================



















