ಶಿರಸಿ ತಾಲೂಕಿನ ಇಂದಿರಾ ನಗರದ ಯುನಿಯನ್ ಪ್ರೌಡಶಾಲೆ ಇಲ್ಲಿ ಹೊಸದಾಗಿ ಮಹಿಳಾ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲಾಗಿದ್ದು, ಇಲ್ಲಿಗೆ ಐಚ್ಛಿಕ ವಿಷಯ ಅತಿಥಿ ಉಪನ್ಯಾಸಕರ (ಪಿ.ಸಿ.ಎಂ.ಬಿ, ಸಿ.ಇ.ಬಿ.ಎ ಮತ್ತು ಎಚ್.ಇ.ಪಿ.ಎಸ್) ಮತ್ತು ಭಾಷಾ ಅತಿಥಿ ಉಪನ್ಯಾಸಕರ (ಕನ್ನಡ, ಇಂಗ್ಲೀಷ, ಹಿಂದಿ ಮತ್ತು ಉರ್ದು) ಹುದ್ದೆಗಳಿಗೆ ಅಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿ, 2ನೇ ಮಹಡಿ, ಮಿನಿ ವಿಧಾನಸೌಧ ಕಟ್ಟಡ, ಶಿರಸಿ. ದೂರವಾಣಿ ಸಂಖ್ಯೆ 08384-298102 ಅಥವಾ ತಾಲೂಕು ಮಾಹಿತಿ ಕೇಂದ್ರವನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಶಿರಸಿ ತಾಲೂಕಿನ ಇಂದಿರಾ ನಗರದ ಯುನಿಯನ್ ಪ್ರೌಡಶಾಲೆ ಇಲ್ಲಿ ಹೊಸದಾಗಿ ಮಹಿಳಾ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲಾಗಿದ್ದು, 2026-27ನೇ ಶೈಕ್ಷಣಿಕ ವರ್ಷಕ್ಕೆ ಪ್ರಥಮ ಪಿ.ಯು.ಸಿ (ಪಿ.ಸಿ.ಎಂ.ಬಿ, ಸಿ.ಇ.ಬಿ.ಎ ಮತ್ತು ಎಚ್.ಇ.ಪಿ.ಎಸ್) ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಯು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಾರ್ಷಿಕ ಆದಾಯ 2.5 ಲಕ್ಷ ಮೀರಿರಬಾರದು. ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ(ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ)ಶೇ.75% ಮೀಸಲಾತಿ ಇತರರಿಗೆ (ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ) ಶೇ.25% ಮೀಸಲಾತಿ ಮತ್ತು ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಮೀಸಲಾತಿ ಇದ್ದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿ, 2ನೇ ಮಹಡಿ, ಮಿನಿ ವಿಧಾನಸೌಧ ಕಟ್ಟಡ, ಶಿರಸಿ. ದೂರವಾಣಿ ಸಂಖ್ಯೆ 08384-298102 ಅಥವಾ ತಾಲೂಕು ಮಾಹಿತಿ ಕೇಂದ್ರವನ್ನು , ಕಚೇರಿ ಸಮಯದಲ್ಲಿ ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.