ಸಾರ್ವಜನಿಕರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಅನೇಕ ಹೋರಾಟಗಳನ್ನು ನಡೆಸುವ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡ ಅನಂತಮೂರ್ತಿ ಹೆಗಡೆ, ಹಲವು ದಿನಗಳ ನಂತರ ಈಗ ಮತ್ತೆ ಪ್ರತಿಭಟನೆಗೆ, ಹೋರಾಟಕ್ಕೆ ಧುಮುಕುತ್ತಿದ್ದಾರೆ.

ಅನಂತಮೂರ್ತಿ ಹೆಗಡೆ

ಶಿರಸಿ,ಸಿದ್ದಾಪುರ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಕುಡಿದು, ರೈತರು, ಬಡವರು, ಕೂಲಿಕಾರರು ಬಲಿಯಾಗುತ್ತಿದ್ದು ಹಲವಾರು ಜನ ತಮ್ಮ ಕಿಡ್ನಿ ಮತ್ತು ಲಿವರ್ ಹಾಳು ಮಾಡಿ ಕೊಳ್ಳುತ್ತಿದ್ದಾರೆ, ಹಲವಾರು ಸಾವನ್ನಪ್ಪಿದ್ದಾರೆ, ಅಕ್ರಮ ಸಾರಾಯಿ ತಕ್ಷಣ ನಿಲ್ಲಬೇಕೆಂದು ಆಗ್ರಹಿಸಿ ಮತ್ತು ಗಾಂಜಾ ಹಾವಳಿ ಮಟ್ಟಹಾಕಲು ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.

ಜೂನ್ 16ರಂದು ಬೆಳಿಗ್ಗೆ 11 ಘಂಟೆಗೆ ಶಿರಸಿಯ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ, ಹಾಗೂ ಸಹಾಯ ಆಯುಕ್ತರಿಗೆ ಮನವಿ ಸಲ್ಲಿಕೆ ಮಾಡಲಾಗುವುದು. ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸುವಂತೆ ಅನಂತಮೂರ್ತಿ ಹೆಗಡೆ ವಿನಂತಿಸಿದ್ದಾರೆ.

ತಾಲೂಕಿನ ಬಹುತೇಕ ಶಾಲೆ ಹಾಗೂ ಕಾಲೇಜಿನ ಸಮೀಪದಲ್ಲಿ ಡ್ರಗ್ಸ್ ಹಾಗೂ ಗಾಂಜಾ ಹಾವಳಿ ಹೆಚ್ಚಾಗಿದ್ದು ವಿದ್ಯಾರ್ಥಿಗಳು ಬಲಿಯಾಗುತ್ತಿದ್ದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಕಳೆದ 2 ವರ್ಷದಿಂದ ಹೆಚ್ಚುತ್ತಿರುವ ಇಂತಹ ಹಲವಾರು ಅನೈತಿಕ ವ್ಯವಹಾರಗಳನ್ನು ತಕ್ಷಣ ಬಂದ್ ಮಾಡುವಂತೆ ಅಗ್ರಹಿಸಿ ಅನಂತ ಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅನಂತ ಮೂರ್ತಿ ಹೆಗಡೆ ತಿಳಿಸಿದ್ದಾರೆ

==========================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading