ಅಪ್ರಾಪ್ತರಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದ ವಾಹನ ಮಾಲೀಕರ ಮೇಲೆ ಯಲ್ಲಾಪುರ ಪೊಲೀಸರು ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಾಹನ ಮಾಲೀಕರಿಗೆ ಭಾರೀ ದಂಡ ವಿಧಿಸಿದೆ.

ಯಲ್ಲಾಪುರ ತಾಲೂಕಿನ ಜಡಗಿನಕೊಪ್ಪದ ಸುರೇಖಾ ಸಿದ್ದಿಯವರಿಗೆ 20 ಸಾವಿರ ರೂ, ಅಲ್ಕೇರಿಯ ಸಜು ಜೋರೆಯವರಿಗೆ 20 ಸಾವಿರ ರೂ ಹಾಗೂ ಹೊಸಳ್ಳಿಯ ಜಗ್ಗು ಕೊಕರೆಯವರಿಗೆ 25 ಸಾವಿರ ರೂ ದಂಡ ವಿಧಿಸಲಾಗಿದೆ.

ಕಿರವತ್ತಿಯಲ್ಲಿ ಹಾಗೂ ಯಲ್ಲಾಪುರದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೈಕ್ ಚಲಾಯಿಸುತ್ತಿದ್ದ ಅಪ್ರಾಪ್ತರು ಪೊಲೀಸರ ಕೈಗೆ ಸಿಕ್ಕಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು, ಪ್ರಕರಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿದ್ದರು.

=========================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading