ಯಲ್ಲಾಪುರ ತಾಲೂಕಿನ ಹುಲಿಮನೆ ಕ್ರಾಸ್ ಸಮೀಪ ಸಂಭವಿಸಿದ ಎರಡು ಬೈಕ್ ಗಳ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಜೂ.5ರಂದು ಸಂಜೆ 7.30 ಗಂಟೆಯ ಸುಮಾರಿಗೆ ಮೂಲತಃ ರಾಮದುರ್ಗದ, ಹಾಲಿ ಯಲ್ಲಾಪುರ ನಿವಾಸಿ 34 ವರ್ಷದ ಸೆಕ್ಯೂರಿಟಿ ಗಾರ್ಡ್ ವೃತ್ತಿ ಯಫಕೀರಪ್ಪ ಮಾರುತಿ ಮಾಳಜನವರ ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆಗೆ ಬೈಕಿನಲ್ಲಿ ಬರುತ್ತಿರುವಾಗ,
ಯಲ್ಲಾಪುರ ತಾಲೂಕಿನ ಹುಲಿಮನೆ ಕ್ರಾಸ್ ಸಮೀಪ, ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಬಂದ ಆರೋಪಿ ಕುಚಗಾಂವನ ವೆಂಕಟ್ರಮಣ ಮಹಾಬಲೇಶ್ವರ ಗೌಡ ಅವರ ಬೈಕ್ ಫಕೀರಪ್ಪ ಅವರ ಬೈಕಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.
ಈ ಘಟನೆಯಲ್ಲಿ ಫಕೀರಪ್ಪ ಅವರಿಗೆ ಗಂಭೀರವಾದ ಗಾಯವಾಗಿತ್ತು. ಗಾಯಾಳು ಫಕೀರಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಫಕೀರಪ್ಪ ಅವರು ಮೃತಪಟ್ಟಿದ್ದಾರೆ.