ಯಲ್ಲಾಪುರ ಪಟ್ಟಣದಲ್ಲಿ ಹಾದು ಹೋಗಿರುವ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಕಳಪೆಯಾಗಿದ್ದು ಇತ್ತೀಚೆಗೆ ವಿಪರೀತ ಹೊಂಡಗುಂಡಿಗಳಿಂದ ಅಪಾಯಕಾರಿಯಾಗಿ ಪರಿಣಮಿಸಿದ್ದು ಬಲಿಗಾಗಿ ಬಾಯ್ತೆರೆದು ಕಾದಂತಿದೆ. ಹೆದ್ದಾರಿ ಹೊಂಡಗಳನ್ನು ಮುಚ್ಚಿ ಕೂಡಲೇ ದುರಸ್ತಿಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ದುರಸ್ತಿ ಮಾಡದಿದ್ದರೆ ಹೆದ್ದಾರಿ ಹೊಂಡಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಲು ಮತ್ತು ದುರಸ್ತಿ ಮಾಡದವರ ವಿರುದ್ಧ ದೂರು ದಾಖಲಿಸಲು ಸಿದ್ಧತೆ ನಡೆದಿದೆ.

ನಮ್ಮ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿ ಮೂಲಭೂತ ಸೌಕರ್ಯಗಳ ಒದಗಿಸಿ ಇಲ್ಲವಾದರೆ ತೆರಿಗೆ ಹಣ ನಮಗೆ ಕೊಡಿ ನಮ್ಮ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ. ಹೆದ್ದಾರಿಯ ಬಹುತೇಕ ಕಡೆಯಲ್ಲಿ ಪ್ರಾಣಕಂಟಕ ಗುಂಡಿಗಳಿದ್ದು ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ ಅಲ್ಲದೆ ಗುಂಡಿ ತಪ್ಪಿಸುವ ಭರದಲ್ಲಿ ಅದೆಷ್ಟೋ ಅಪಘಾತಗಳಾಗುತ್ತಿದ್ದು ಇದಕ್ಕೆ ಹೆದ್ದಾರಿ ನಿರ್ವಹಣೆ ಮಾಡುವವರು ನೇರ ಜವಾಬ್ದಾರರಾಗಲಿದ್ದಾರೆ.

ರಸ್ತೆ ಸುರಕ್ಷತೆ ಮತ್ತು ಸಂಚಾರಕ್ಕೆ ಸಂಬಂಧಿಸಿದಂತೆ ರಸ್ತೆಗಳಲ್ಲಿನ ಹೊಂಡಗುಂಡಿಗಳಿಂದ ಅಪಘಾತ ಸಂಭವಿಸಿ ಆಗುವ ಹಾನಿಗೆ ಸಂಬಂಧಿಸಿದ ಇಲಾಖೆ, ಗುತ್ತಿಗೆದಾರ, ಏಜೆನ್ಸಿ ನೇರ ಹೊಣೆಯಾಗಲಿದ್ದು ಆರ್.ಎಂ.ಎ ಕಾಯ್ದೆ ಅನ್ವಯ 198 (ಎ) ಮೊಟಾರು ವಾಹನ ಕಾಯ್ದೆ 1988 ಅಡಿಯಲ್ಲಿ ಪ್ರಕರಣ ದಾಖಲಿಸಬಹುದಾಗಿದ್ದು ತಪ್ಪಿತಸ್ತರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.

ಬಹುತೇಕ ಮಾಧ್ಯಮಗಳಲ್ಲಿ ಈ ಸಮಸ್ಯೆಯ ಬಗ್ಗೆ ಬಹಳಷ್ಟು ಬಾರಿ ಬಂದಿದೆ. ಆದರೂ ದುರಸ್ತಿ ಮಾಡದಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಅಹಿಂದ ವೇದಿಕೆ ಅಡಿಯಲ್ಲಿ ಹೆದ್ದಾರಿಯ ಹೊಂಡಗಳಲ್ಲಿ ಗಿಡನೆಟ್ಟು ವನಮಹೋತ್ಸವ ಆಚರಿಸಿ ಪ್ರತಿಭಟಿಸಲಾಗುವುದು ಮತ್ತು ದೂರು ದಾಖಲಿಸಲಾಗುವುದು ಎಂದು ಎಂದು ಅಖಿಲ ಕರ್ನಾಟಕ ಅಹಿಂದ ವೇದಿಕೆ ಜಿಲ್ಲಾಧ್ಯಕ್ಷ ಅಹಿಂದ ದ್ಯಾಮಣ್ಣ ಬೋವಿ ವಡ್ಡರ ಹೇಳಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news

E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur

ನಮ್ಮ FACE BOOK GROUP JOIN ಆಗಿ https://www.facebook.com/groups/593852164946589

LATEST NEWS

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading