ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಬಾಲಗೋಪಾಲ ಮತ್ತು ರಾಧಾ-ಕೃಷ್ಣ ವೇಷ ಸ್ಪರ್ಧೆಯು ಪಟ್ಟಣದ ವೆಂಕಟರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ರವಿವಾರ ಸಂಜೆ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಕಾಸ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಮಾತನಾಡಿ, ಇಂತಹ ಸ್ಪರ್ಧೆಗಳು ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುತ್ತವೆ ಎಂದರು.

ವೀರಶೈವ ಮಹಾ ಸಭಾದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾಸಿಸಲಾಯಿತು. ವಿನಯಾ ಪ್ರಭು, ವೀಣಾ ಭಟ್, ನಾಸಿರುದ್ದೀನ್ ಖಾನ್ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಪ್ರಮುಖರಾದ ಎಸ್.ಎಲ್.ಭಟ್, ನಂದನ ಬಾಳಗಿ, ರವಿರಾಜ ಪ್ರಭು, ಮೋಹನ ರೇವಣ್ಕರ್, ಮಹೇಶ ಗೌಳಿ, ಮಂಜುನಾಥ ನಾಯ್ಕ, ಸುರೇಶ ಬೋರ್ಕರ್, ಮೋಹನ ನಾಯ್ಕ, ಶ್ರೀಧರ ಶೆಟ್ಟಿ, ಸುನಂದಾ ಪಾಟಣಕರ್, ಶಾಂತಾರಾಮ ಹೆಗಡೆ, ಗೋಪಾಲ ನೇತ್ರೇಕರ್ ಮುಂತಾದವರು ಇದ್ದರು.

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶೇಷಗಿರಿ ಪ್ರಭು ಸ್ವಾಗತಿಸಿದರು. ಪಾರ್ವತಿ ಕಟ್ಟಿಮನಿ ನಿರ್ವಹಿಸಿದರು. ಮೋಹನ ರೇವಣ್ಕರ್ ವಂದಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading