35 ವರ್ಷಗಳ ಹಿಂದೆ ಶಿರಸಿಯಲ್ಲಿ ನಡೆದಿದ್ದ ಹೊಡೆದಾಟದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಪೊಲೀಸ್ ವಿಶೇಷ ತಂಡ ಈ ಆರೋಪಿಯನ್ನು ಬಂಧಿಸಿದೆ.

29-11-1990ರಂದು ಶಿರಸಿಯ ಐದು ರಸ್ತೆಯ ಹತ್ತಿರ ಅಗಸೇಬಾಗಿಲಿನ ದೀಪಕ್ ತಂದೆ ವಿಟ್ಠಲ್ ಭಂಡಾರಿ ಎಂಬಾತನು ದಿನಕರ್ ನಾರಾಯಣ ಶೆಟ್ಟಿ ಎಂಬಾತನಿಗೆ ಹೊಡೆದಿದ್ದರು. ಈ ಬಗ್ಗೆ ನಾರಾಯಣ ನಾಗಪ್ಪ ಶೆಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ದೀಪಕ್ ಭಂಡಾರಿಯು ಅಂದಿನಿಂದ ತಲೆಮರೆಸಿಕೊಂಡಿದ್ದು, ಪೊಲೀಸರಿಗೆ ಈತನ ಸುಳಿವು ಸಿಕ್ಕಿರಲಿಲ್ಲ.

ಈತನ ಪತ್ತೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ನವದೆಹಲಿಯಲ್ಲಿ ವಾಸಮಾಡಿಕೊಂಡಿದ್ದ ಆರೋಪಿಯು ದಾಂಡೇಲಿಗೆ ಬರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರಕಿತ್ತು. ಸೋಮವಾರ ಆರೋಪಿಯನ್ನು ದಾಂಡೇಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading