ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ ಖದೀಮರು, ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.

ನಿವೃತ್ತ ಬ್ಯಾಂಕ್ ನೌಕರ ಜಗದೀಶ ಕುಮಾರ ತಂದೆ ವಿಶ್ವನಾಥ ದೇಸಾಯಿ, ಕಾರವಾರದ ಪಿಕಳೆ ರಸ್ತೆಯಲ್ಲಿರುವ ಎಟಿಎಂನಲ್ಲಿ ತಮ್ಮ ಖಾತೆಯಿಂದ 2 ಸಾವಿರ ರೂ ವಿಥ್ ಡ್ರಾ ಮಾಡಿದ್ದರು. ಸಂಜೆ ಅವರ ಬ್ಯಾಂಕ್ ಖಾತೆಯನ್ನು ಯಾರೋ ಅಪರಿಚಿತರು ಹ್ಯಾಕ್ ಮಾಡಿ, ಜಗದೀಶ ಕುಮಾರ್ ಅವರ ಬ್ಯಾಂಕ್ ಖಾತೆಯಿಂದ 57,000 ರೂ ಹಣವನ್ನು ತಮ್ಮ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಈ ಕುರಿತು ಜಗದೀಶ ಕುಮಾರ್ ಕಾರವಾರದ ಸಿ.ಇ.ಎನ್.ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading