ತನ್ನ ತಂಗಿಯ ಮನೆಗೆ ತೆರಳಿದ್ದ ಯಲ್ಲಾಪುರ ತಾಲೂಕಿನ ಹಂಸನಗದ್ದೆಯ ವೃದ್ಧೆಯೊಬ್ಬಳು ಎರಡು ಗುಟುಕು ನೀರು ಕುಡಿದು, ಮೂರನೇ ಗುಟುಕು ನೀರು ಕುಡಿಯುವುದರೊಳಗೆ ಮಲಗಿದ್ದಲ್ಲಿಯೇ ಪ್ರಾಣಬಿಟ್ಟ ಘಟನೆ ಬನವಾಸಿ ಸಮೀಪದ ಹುಡೇಲಕೊಪ್ಪದಲ್ಲಿ ನಡೆದಿದೆ.

ಯಲ್ಲಾಪುರ ತಾಲೂಕಿನ ಬಳಗಾರ ಸಮೀಪದ ಹಂಸನಗದ್ದೆಯ 75 ವರ್ಷದ ಪುಟ್ಟಿ ಕೋಂ ಚನ್ನಾ ಗೌಡ ಅವರು ಆರೋಗ್ಯ ಸರಿಯಿಲ್ಲದ ಕಾರಣ ಆ.23ರಂದು ತನ್ನ ತಂಗಿಯ ಮನೆಯಾದ ಹುಡೇಲಕೊಪ್ಪಕ್ಕೆ ತೆರಳಿದ್ದರು. ಗುರುವಾರ ರಾತ್ರಿ ಮಲಗಿದ್ದಾಗ ನೀರು ಬೇಕೆಂದು ಕೇಳಿದಾಗ, ಎರಡು ಗುಟುಕು ನೀರು ಕುಡಿದು, ಮೂರನೆ ಗುಟುಕು ನೀರು ಕುಡಿಯದೇ ಹೊರಗೆ ಹಾಕಿ ಯಾವುದೇ ಪ್ರತಿಕ್ರಿಯೆ ಇಲ್ಲದೇ ಮೃತಪಟ್ಟಿದ್ದಾಳೆ.

ಶುಕ್ರವಾರ ಬೆಳಿಗ್ಗೆ ಖಚಿತಪಡಿಸಿಕೊಳ್ಲುವುದಕ್ಕಾಗಿ ಕುಟುಂಬದವರು ಶಿರಸಿ ಆಸ್ಪತ್ರೆಗೆ ತಂದಾಗ ಪರೀಕ್ಷಿಸಿದ ವೈದ್ಯರು ವೃದ್ಧೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading