ಮನೆಯೊಳಗೆ ಪ್ರವೇಶಿಸಿ ಬೆಡ್ ರೂಂನಲ್ಲಿ ಕಪಾಟಿನ ಒಳಗಡೆ ಇದ್ದ ಹಣವನ್ನು ಕದ್ದೊಯ್ದ ಘಟನೆ ರಾಮನಗುಳಿಯಲ್ಲಿ ನಡೆದಿದೆ.

ರಾಮನಗುಳಿಯ ವಿಲ್ಸನ್ ತಂದೆ ಸಾವೇರ ಡಿಕೊಸ್ತಾ ಅವರ ಮನೆಯೊಳಗೆ ಪ್ರವೇಶಿಸಿದ ಆರೋಪಿ ಹಳವಳ್ಳಿಯ ಭಾಸ್ಕರ ಸಿದ್ದಿ ಎಂಬಾತ ವಿಲ್ಸನ್ ಅವರ ಮನೆಯೊಳಗೆ ಪ್ರವೇಶಿಸಿ, ಬೆಡ್ ರೂಂನ ಕಪಾಟಿನ ಒಳಗೆ ಇದ್ದ 10 ಸಾವಿರ ರೂ ಹಣವನ್ನು ಕಳ್ಳತನ ಮಾಡಿದ್ದು, ನಂತರ ರಾತ್ರಿಯ ಸಮಯದಲ್ಲಿ ಮತ್ತೆ ಇದೇ ಮನೆಯ ಹೆಂಚನ್ನು ತೆಗೆದು ಒಳಗೆ ಹೋಗಿ ಕಳ್ಳತನ ಮಾಡಲು ಯತ್ನಿಸಿದ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೆಯ ಬಾಗಿಲನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು, ಕಳ್ಳರು ದೋಚಿದ ಪ್ರತ್ಯೇಕ ಎರಡು ಘಟನೆ ಹಳಿಯಾಳದಲ್ಲಿ ನಡೆದಿದೆ.

ಹಳಿಯಾಳದ ನಿವಾಸಿ ಉಸ್ಮಾನಗಣಿ ಚೌದರಿ ಅವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು, ಕೋಣೆಯೊಳಗೆ ಇದ್ದ ಕಬ್ಬಿಣದ ಕಪಾಟಿನ ಬಾಗಿಲನ್ನು ತೆರೆದು ಕಪಾಟಿನಲ್ಲಿದ್ದ ಬಂಗಾರದ ಮಂಗಳಸೂತ್ರ, ಒಂದು ಜತೆ ಕೈಕಡಗ, ಬೆಳ್ಳಿ ನೆಕ್ಲೆಸ್ ಮುಂತಾದವುಗಳನ್ನು ಕದ್ದೊಯ್ದಿದ್ದಾರೆ.

ಹಳಿಯಾಳದಲ್ಲಿಯೇ ನಡೆದ ಇನ್ನೊಂದು ಘಟನೆಯಲ್ಲಿ ನಿವೃತ್ತ ಶಿಕ್ಷಕ ವೆಂಕಟೇಶ ಶೇಟ್ ಅವರ ಮನೆಯಲ್ಲಿಯೂ ಕಳ್ಳತನವಾಗಿದ್ದು,

ಮನೆಯ ಬಾಗಿಲಿನ ಚಿಲಕವನ್ನು ಮೀಟಿ ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು, ಕಪಾಟಿನ ಒಳಗೆ ಇದ್ದ ಬೆಳ್ಳಿಯ ಲೋಟ, ಚಮಚ, ಕಾಲ್ಗೆಜ್ಜೆ, ಎರಡು ವಾಚ್ ಗಳು, ಎರಡು ಸ್ಮಾರ್ಟ್ ಫೋನ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಎರಡೂ ಪ್ರಕರಣಗಳೂ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading