ಯಲ್ಲಾಪುರ ತಾಲೂಕಿನ ಇಡಗುಂದಿಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಹತ್ತಿರ ಸೋಮವಾರ ರಾತ್ರಿ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಹೊಡೆದಾಟ ನಡೆದಿದ್ದು, ಏಳು ಜನರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಡಗುಂದಿಯ ಗಂಗಾಧರ ತಂದೆ ಅನಂತ ನಾಯ್ಕ ಅವರು ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ನೋಡುತ್ತಿರುವ ಸಂದರ್ಭದಲ್ಲಿ ಮಂಜುನಾಥ ಹನುಮಂತ ವಡ್ಡರ್ ಎಂಬಾತ ಗಲಾಟೆ ಮಾಡುತ್ತಿರುವಾಗ ಹೊಡೆದಾಟ ನಡೆದಿದ್ದು,

ಆರೋಪಿಗಳಾದ ವಜ್ರಳ್ಳಿಯ ವಿನೋದ ನಾಯ್ಕ, ಇಡಗುಂದಿಯ ಮಾರುತಿ ನಾಯ್ಕ, ಉದಯ ಮೆಸ್ತಾ, ವಸಂತ ನಾಯ್ಕ, ವಿಘ್ನೇಶ ನಾಯ್ಕ, ಅಣ್ಣಪ್ಪ ರಾಯ್ಕರ್, ಸಂತೋಷ ನಾಯ್ಕ ಅವರು ತಮಗೆ ಹಾಗೂ ಮಂಜುನಾಥ ವಡ್ಡರ್ ಅವರಿಗೆ ಹೊಡೆದು ಗಾಯ ಮಾಡಿದ್ದಾರೆ ಎಂದು ಗಂಗಾಧರ ನಾಯ್ಕ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪಿಎಸ್ಸೈ ಯಲ್ಲಾಲಿಂಗ ಕುನ್ನೂರ ತನಿಖೆ ಕೈಗೊಂಡಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading