ಯಲ್ಲಾಪುರ ತಾಲೂಕಿನ ಕಿರವತ್ತಿ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ಕಿರವತ್ತಿ ವಲಯಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ನಡೆಯಿತು.

ಈ ಕ್ರೀಡಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಉದ್ಘಾಟಿಸಿ ಮಾತನಾಡಿ, ಕ್ರೀಡಾಮನೋಭಾವದಿಂದ ಆಡುವುದು ಮುಖ್ಯ. ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿ ನಡೆಯಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪ್ರಕಾಶ ತಾರಿಕೊಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣ ಜಗದಾಳಿ ,ಪ್ರಾಂಶುಪಾಲ ಸುಭಾಸ ನಾಯಕ, ಮುಖ್ಯಾಧ್ಯಾಪಕ ಜನಾರ್ಧನ ಗಾಂವ್ಕರ , ಇಸಿಒ ಪ್ರಶಾಂತ ಜಿ.ಎನ್. , ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ ನಾಯಕ ಮುಂತಾದವರು ಇದ್ದರು.

ಎರಡು ದಿನ ನಡೆದ ಕ್ರೀಡಾಕೂಟದಲ್ಲಿ ಕಿರವತ್ತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವಾರು ಆಟಗಳಲ್ಲಿ ಬಹುಮಾನ ಗಳಿಸಿದರು.

100 mtr ಕಿರಣ್ ಲಮಾಣಿ ದ್ವಿತೀಯ  ಮೈಕೆಲ್ ಸಿದ್ದಿ ತ್ರತೀಯ 200 ಮೀ ಶೌಕತ್ ಬಿಜಾಪುರ ಪ್ರಥಮ ಅಭಿಷೇಕ್ ಕೋರಿ ಕೊಪ್ಪ ತ್ರತೀಯ 400 ಮೀ ಕಿರಣ್ ಜೋರೆ ದ್ವಿತೀಯ 800 ಮೀ ಸಂತೋಷ ಎಡಗೆ ಪ್ರಥಮ 1500 ಮೀ ಯಶವಂತ ಸೂಳಿಕಟ್ಟಿ ಪ್ರಥಮ 4100 ರಿಲೇ ಪ್ರಥಮ 4400 ರಿಲೇ ಪ್ರಥಮ ಚಕ್ರ ಬಾಬು ಶೆಂಡಗೆ ದ್ವಿತೀಯ ಗುಂಡು ಬಾಬು ಶೆಂಡಗೆ ತ್ರತೀಯ 200 ವೆರೊನಿಕಾ ಗಾಡಿ ಪ್ರಥಮ, 110 ಅಡೆತಡೆ ಓಟ ಲಿಶಾ ಸಿದ್ದಿ ತ್ರತೀಯ ಉದ್ದ ಜಿಗಿತ, ತ್ರಿವಿಧ ಜಿಗಿತ ಕಿರಣ ಲಮಾಣಿ ಪ್ರಥಮ ಚೆಸ್ ರುಕ್ಮಿಣಿ ಶೆಂಡಿಗೆ ಪ್ರಥಮ,ಕಬಡ್ಡಿ ಬಾಲಕ ಬಾಲಕಿಯರ ಪ್ರಥಮವಾಲಿಬಾಲ್ ಬಾಲಕಿಯರು ಪ್ರಥಮ ಖೋಖೋ ಬಾಲಕರು ಪ್ರಥಮ ಬಾಲಕಿಯರು ದ್ವಿತೀಯ ಎತ್ತರ ಜಿಗಿತ ನಾಗರಾಜ್ ಮಲಗೊಂಡೆ ಪ್ರಥಮ 110 ಹರ್ಡಲ ಸಂತೋಷ ಕೋಕರೆ ದ್ವಿತೀಯ ಕ್ರೀಡಾಕೂಟದ ಬಾಲಕರ ವೀರಾಗ್ರಣಿಯಾಗಿ ಕಿರವತ್ತಿ ಪ್ರೌಢಶಾಲೆಯ ಕಿರಣ ಲಮಾಣಿ ಹಾಗೂ ಬಾಲಕಿಯರ ವೀರಾಗ್ರಣಿಯಾಗಿ ಜಯಶ್ರೀ ಮೇಲಾರ ವೈಟಿಎಸ್ ಎಸ್ ಇವಳು ಬಹುಮಾನಿತರಾದರು. ಸಮಗ್ರ ವೀರಾಗ್ರಣಿ ತಂಡವಾಗಿ ವೈ.ಟಿ.ಎಸ್.ಎಸ್. ಶಾಲಾತಂಡ ಹೊರಹೊಮ್ಮಿತು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading