ಯಲ್ಲಾಪುರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. ಲೋಕ್ ಅದಾಲತ್ ನಲ್ಲಿ ಒಟ್ಟೂ 282 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರ್ ಎಸ್ ಅವರ ನೇತ್ರತ್ವದಲ್ಲಿ 64 ಪ್ರಕರಣ ದಾಖಲಾಗಿದ್ದು, 53 ಪ್ರಕರಣಗಳು ಇತ್ಯರ್ಥಗೊಂಡಿವೆ. 1,67,81,627 ರೂ ಭರಣವಾಯಿತು. ಸಂಧಾನಕಾರರಾಗಿ ನ್ಯಾಯವಾದಿ ಗಣಪತಿ ಭಟ್ಟ ಕಾರ್ಯನಿರ್ವಹಿಸಿದರು. ಸಿವಿಲ್ ನ್ಯಾಯಾಧೀಶರಾದ ಅನಿತಾಕುಮಾರಿ ಅವರ ನೇತ್ರತ್ವದಲ್ಲಿ 314 ಪ್ರಕರಣ ದಾಖಲಾಗಿದ್ದು, 228 ಪ್ರಕರಣ ಇತ್ಯರ್ಥಗೊಂಡಿವೆ. 35,54,638 ರೂ ಭರಣವಾಯಿತು. ಸಂಧಾನಕಾರರಾಗಿ ನ್ಯಾಯವಾದಿ ಸುಭಾಸ ಭಟ್ಟ ಕಾರ್ಯನಿರ್ವಹಿಸಿದರು.

ಬ್ಯಾಂಕ್ ಪಿ.ಎಲ್.ಸಿ 520 ಪ್ರಕರಣ ದಾಖಲಾಗಿದ್ದು, 1 ಪ್ರಕರಣ ಇತ್ಯರ್ಥಗೊಂಡಿದೆ. 50,000ರೂ ಭರಣವಾಯಿತು. ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ಟ, ಅಪರ ಸರ್ಕಾರಿ ವಕೀಲರಾದ ಎನ್.ಟಿ.ಗಾಂವ್ಕರ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಝೀನತ್ ಭಾನು ಶೇಖ್ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಮಿಳುನಾಡಿನ ಕಾಂಚೀಪುರದಲ್ಲಿ ನಡೆದ 63 ನೆಯ ಅಖಿಲ ಭಾರತೀಯ ಶಾಸ್ತ್ರೋತ್ಸವ ಸ್ಪರ್ಧೆಗಳಲ್ಲಿ ಯಲ್ಲಾಪುರ ತಾಲೂಕಿನ ಉಮ್ಮಚಿಗಿಯ ಶ್ರೀಮಾತಾ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳು ಮಹತ್ವದ ಸಾಧನೆ ಮಾಡಿದ್ದಾರೆ.

ಈ ಕಾಲೇಜಿನ ಜ್ಯೋತಿಷ್ಯ ವಿಭಾಗದ ವಿದ್ಯಾರ್ಥಿ ಸುಮಂತ ಅನಂತ ಜೋಶಿ ಈತನು ಜೌತಿಷ ಶಲಾಕಾ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಮತ್ತು ಭಾರ್ಗವ ವಿ. ಜಿ. ಈತನು ಧರ್ಮಶಾಸ್ತ್ರ ಭಾಷಣ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading