ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಲಾರಿಯೊಂದು ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರನು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಯಲ್ಲಾಪುರ ಪಟ್ಟಣದ ಮಾಗೋಡ ಕ್ರಾಸ್ ಸಮೀಪ ಪುರಾಣಜಡ್ಡಿ ಕ್ರಾಸ್ ಸಮೀಪ ಗುರುವಾರ ರಾತ್ರಿ ನಡೆದಿದೆ.

ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀ ವೇಗವಾಗಿ ಚಲಾಯಿಸಿಕೊಂಡುಬಂದು, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಬೈಕ್ ಸವಾರ ಹಳವಳ್ಳಿಯ ದುಗ್ಗನಮನೆಯ ಕಾರ್ಪೆಂಟರ್ ವೃತ್ತಿಯ 21 ವರ್ಷದ ದೇವೇಂದ್ರ ಸೀತಾರಾಮ ಗೌಡ ಅವರು ತಲೆ ಹಾಗೂ ಕಾಲಿಗೆ ಗಂಭೀರವಾದ ಗಾಯಗೊಂಡು ಮೃತಪಟ್ಟಿದ್ದಾರೆ.

ಬೈಕ್ ಹಿಂಬದು ಕುಳಿತು ಪ್ರಯಾಣಿಸುತ್ತಿದ್ದ ಕಳಚೆಯ 20 ವರ್ಷದ ವಿಜೇತ ಪ್ರೇಮಾನಂದ ಗೌಡ ಗಾಯಗೊಂಡಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪರಿಚಿತ ಲಾರಿ ಚಾಲಕನು ಅಪಘಾತಪಡಿಸಿ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡುಹೋಗಿದ್ದಾನೆ. ಈ ಕುರಿತು ಮೃತ ದೇವೇಂದ್ರ ಗೌಡನ ಸಹೋದರ ಗಿರೀಶ ಗೌಡ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಘಟನೆಯಲ್ಲಿ ಬೈಕ್ ಜಕಂಗೊಂಡಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading