ಮಿನಿ ಗೂಡ್ಸ್ ವಾಹನಕ್ಕೆ ಲಾರಿಯೊಂದು ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ತಾಲೂಕಿನ ಕೋಳಿಕೆರೆ ಸಮೀಪ ದೇಶಪಾಂಡೆನಗರ ಕ್ರಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಯಲ್ಲಾಪುರ ಪಟ್ಟಣದ ನೂತನ ನಗರದ ಫಕೀರಪ್ಪ ಗುಡ್ಡಪ್ಪ ಜಿಡ್ಡಿ ತನ್ನ ಮಿನಿ ಗೂಡ್ಸ್ ಲಾರಿಯಲ್ಲಿ ಹುಬ್ಬಳ್ಳಿಯಿಂದ ಕಿರಾಣಿ ವಸ್ತುಗಳನ್ನು ತುಂಬಿಕೊಂಡು ಯಲ್ಲಾಪುರ ಕಡೆಗೆ ಬರುತ್ತಿರುವಾಗ, ದೇಶಪಾಂಡೆನಗರ ಕ್ರಾಸ್ ನಲ್ಲಿ, ಆರೋಪಿ ಲಾರಿ ಚಾಲಕ ಕಲಘಟಗಿ ಗೊಂಬ್ಯಾಪುರದ ಕಿರಣ ರುದ್ರಪ್ಪಾ ವಡ್ಡರ್ ಎಂಬಾತ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ

ಚಲಾಯಿಸಿಕೊಂಡುಬಂದು ಹಿಂಬದಿಯಿಂದ ಮಿನಿ ಗೂಡ್ಸ್ ಲಾರಿಗೆ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಲಾರಿಯು ಪಲ್ಟಿಯಾಗಿದೆ. ಘಟನೆಯಲ್ಲಿ ಫಕೀರಪ್ಪ ಅವರ ತಲೆಗೆ ಗಾಯವಾಗಿದ್ದು, ಲಾರಿಯಲ್ಲಿದ್ದ ಷಣ್ಮುಖ ಸೂಳಿಕಟ್ಟಿ ಎಂಬಾತನಿಗೆ ತಲೆಗೆ ಹಾಗೂ ಕಾಲಿಗೆ ಗಾಯವಾಗಿದ್ದು, ಇನ್ನೊಂದು ಲಾರಿಯಲ್ಲಿದ್ದ ನಾಸೀರ್ ಅಹ್ಮದ್ ಗೆ ಗಾಯವಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

============

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading