ಸೋಮವಾರ ಯಲ್ಲಾಪುರದಲ್ಲಿ ಭಾರತೀ ನೃತ್ಯ ಕಲಾಕೇಂದ್ರದಿಂದ ನೃತ್ಯ ಸಂಭ್ರಮ
ಯಲ್ಲಾಪುರ ಪಟ್ಟಣದ ಭಾರತೀ ನೃತ್ಯ ಕಲಾಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ “ನೃತ್ಯ ಸಂಭ್ರಮ” ಭರತನಾಟ್ಯ ಕಾರ್ಯಕ್ರಮವು ಏ.6 ಸೋಮವಾರದಂದು ಪಟ್ಟಣದ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿದೆ.
ಈ ಕಾರ್ಯಕ್ರಮವನ್ನು ವನಜಾಕ್ಷಿ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ವಿಶ್ವದರ್ಶನ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ಮಹಿಳಾ ಉದ್ಯಮಿ ಅಪರ್ಣಾ ಘಟ್ಟಿ, ಶಿಕ್ಷಕಿ ಸವಿತಾ ಭಟ್ಟ ಮುಂತಾದವರು ಆಗಮಿಸುವರು.
ನೃತ್ಯ ಸಂಭ್ರಮದಲ್ಲಿ ನಟುವಾಂಗದಲ್ಲಿ ವಿದುಷಿ ಸುಮಾ ವೆಂಕಟ್ರಮಣ ಹೆಗಡೆ, ಹಾಡುಗಾರಿಕೆಯಲ್ಲಿ ವಾಣಿ ಉಡುಪಿ, ಮೃದಂಗ ವಾದನದಲ್ಲಿ ವಿದ್ವಾನ್ ಪದ್ಮರಾಜ ಕೇರಳ, ವಯಲೀನ್ ನಲ್ಲಿ ಶಂಕರ ಕಬಾಡಿ ಧಾರವಾಡ, ರಿದಮ್ ನಲ್ಲಿ ರಾಘು ರಂಗದೋಳ್ ಪಾಲ್ಗೊಳ್ಳಲಿದ್ದಾರೆ.
ಪುಷ್ಪಾಂಜಲಿ, ಅಲಾರಿಪು, ಜತಿಸ್ವರ, ಗಣೇಶ ಸ್ತುತಿ, ಕೌತುಕಂ, ದೇವರ ನಾಮಗಳು, ತಿಲ್ಲಾನಾ, ಜಾನಪದ ನೃತ್ಯಗಳ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಭಾರತೀ ನೃತ್ಯ ಕಲಾಕೇಂದ್ರದ ಅಧ್ಯಕ್ಷ ವಿ.ಟಿ.ಹೆಗಡೆ ತೊಂಡೆಕೆರೆ ಹಾಗೂ ವಿದುಷಿ ಸುಮಾ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.