ಯಲ್ಲಾಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ಪ್ರಾರಂಭವಾಗಿರುವ ಅಪ್ಕೋಸ್ ಟ್ರೇಡ್ ಸೆಂಟರ್ ನಲ್ಲಿ ಅಡಿಕೆ ಮತ್ತು ಕಾಳುಮೆಣಸಿಗೆ ಅತೀ ಹೆಚ್ಚು ದರ ದೊರೆಯುತ್ತಿದೆ. ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯವನ್ನೂ ಇಲ್ಲಿ ನೀಡಲಾಗುತ್ತಿದೆ. ವಿಶ್ವಾಸಾರ್ಹ ವ್ಯವಹಾರದೊಂದಿಗೆ ಗ್ರಾಹಕಸ್ನೇಹಿ ವ್ಯವಸ್ಥೆಯೊಂದಿಗೆ ಅಪ್ಕೋಸ್ ಟ್ರೇಡ್ ಸೆಂಟರ್ ಅಡಿಕೆ ಬೆಳೆಗಾರರ ಮನಗೆದ್ದಿದ್ದು, ಹೊಸ ಭರವಸೆಯನ್ನು ಮೂಡಿಸಿದೆ.
ಅಡಿಕೆ ಕಾಳು ಮೆಣಸಿಗೆ ಅತೀ ಹೆಚ್ಚು ದರ
ಅಪ್ಕೋಸ್ ಟ್ರೇಡ್ ಸೆಂಟರ್ ನಲ್ಲಿ ಬೆಳೆಗಾರರು ತಂದ ಅಡಿಕೆ ಮತ್ತು ಕಾಳುಮೆಣಸಿಗೆ ಉತ್ತಮ ಮತ್ತು ಸ್ಪರ್ಧಾತ್ಮಕದರ ಲಭ್ಯವಾಗುತ್ತಿದೆ. ಇದರಿಂದ ತೋಟಿಗರು ಬಹಳ ಖುಷಿಪಡುವಂತಾಗಿದೆ. ದಿನದಿಂದ ದಿನಕ್ಕೆ ಅಪ್ಕೋಸ್ ಟ್ರೇಡ್ ಸೆಂಟರ್ ನಲ್ಲಿ ಅಡಿಕೆ ಆವಕವು ಹೆಚ್ಚಾಗುತ್ತಿದೆ. ಯಲ್ಲಾಪುರ ತಾಲೂಕಿನ ಎಲ್ಲಾ ಭಾಗಗಳಿಂದ ಅಪ್ಕೋಸ್ ಟ್ರೇಡ್ ಸೆಂಟರ್ ಗೆ ಅಡಿಕೆ ಆವಕವಾಗುತ್ತಿದೆ. ಉತ್ತಮ ದರ ಇಲ್ಲಿ ಸಿಗುವ ಕಾರಣದಿಂದಾಗಿ ಮೂರ್ನಾಲ್ಕು ಹೊರ ತಾಲೂಕುಗಳ ಜನರೂ ಸಹ ಅಪ್ಕೋಸ್ ಟ್ರೇಡ್ ಸೆಂಟರ್ ಗೆ ಅಡಿಕೆ, ಕಾಳುಮೆಣಸು ತರುತ್ತಿದ್ದಾರೆ.
ಇಲ್ಲಿದೆ ಉತ್ತಮ ಸೌಲಭ್ಯ
ಅಪ್ಕೋಸ್ ಟ್ರೇಡ್ ಸೆಂಟರ್ ನಲ್ಲಿ ಅಡಿಕೆ, ಕಾಳುಮೆಣಸು ಮಾರಾಟಕ್ಕೆ ಉತ್ತಮ ಸೌಲಭ್ಯ ಇದೆ. ಉತ್ತಮ ದರಕ್ಕೆ ಅಡಿಕೆ, ಕಾಳು ಮೆಣಸು ವಿಕ್ರಿಯಾಗುತ್ತಿದೆ. ನಗುಮೊಗದ ಸೇವೆ ಇಲ್ಲಿ ಸದಾ ಲಭ್ಯವಿದೆ. ಅಡಿಕೆ ವ್ಯಾಪಾರಸ್ಥರಿಂದ ಉತ್ತಮ ಸಹಕಾರ ದೊರೆಯುತ್ತಿದೆ.
ಅಪ್ಕೋಸ್ ಟ್ರೇಡ್ ಸೆಂಟರ್ ನ ಭಾಗೀದಾರರಾದ ವಿನಾಯಕ ಭಟ್ಟ ಎಂ.ಕೆ.ಬಿ ಹಾಗೂ ಮಾರುತಿ ಘಟ್ಟಿ ಅನೇಕ ದಶಕಗಳಿಂದ ಅಡಿಕೆ, ಕಾಳು ಮೆಣಸು ವ್ಯವಹಾರದಲ್ಲಿ ಯಶಸ್ವಿಯಾಗಿದ್ದು, ಗೌರವಾನ್ವಿತ ವ್ಯಾಪಾರಸ್ಥರಾಗಿ ಜನಮನ್ನಣೆ ಪಡೆದವರು. ಇವರು ಈ ಸಂಸ್ಥೆಯ ಚುಕ್ಕಾಣಿ ಹಿಡಿದವರು. ಸಹಕಾರಿ ಸಂಸ್ಥೆಯಲ್ಲಿ ಅನುಭವ ಹೊಂದಿರುವ ರಾಘವೇಂದ್ರ ಭಟ್ಟ, ಯುವ ಉದ್ಯಮಿ ಗಿರೀಶ ಭಟ್ಟ ಅವರು ಅಪ್ಕೋಸ್ ಟ್ರೇಡ್ ಸೆಂಟರ್ ನ ವ್ಯಾಪಾರ, ವ್ಯವಹಾರದಲ್ಲಿ ದಿನನಿತ್ಯ ಸಾಥ್ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಉತ್ಸಾಹಿ, ಅನುಭವಿ ಉದ್ಯಮಿಗಳ ನೇತ್ರತ್ವದಲ್ಲಿ ಅಪ್ಕೋಸ್ ಟ್ರೇಡ್ ಸೆಂಟರ್ ಯಲ್ಲಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಗಟ್ಟಿಯಾದ ಹೆಜ್ಜೆಯೂರಿದೆ. ಈ ಸಂಸ್ಥೆಗೆ ಅಡಿಕೆ ಬೆಳೆಗಾರರ ಪ್ರೋತ್ಸಾಹ, ವ್ಯಾಪಾರಸ್ಥರ ಬೆಂಬಲ ನಿರಂತರವಾಗಿ ಸಿಗುತ್ತಿದೆ. ಆರಂಭಗೊಂಡ ಕೆಲವೇ ದಿನಗಳಲ್ಲಿ ಅಡಿಕೆ ಬೆಳೆಗಾರರ ಮನಗೆದ್ದು, ಉತ್ತಮ ಸ್ಪಂದನೆಯೊಂದಿಗೆ ಅಪ್ಕೋಸ್ ಟ್ರೇಡ್ ಸೆಂಟರ್ ಅಡಿಕೆ ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.
ಅಡಿಕೆ, ಕಾಳುಮೆಣಸು ಬೆಳೆಗರರ ಉತ್ತಮ ಆಯ್ಕೆ ಅಪ್ಕೋಸ್ ಟ್ರೇಡ್ ಸೆಂಟರ್ ಯಲ್ಲಾಪುರ, ಬನ್ನಿ ಭೇಟಿನೀಡಿ, ಮನಸ್ಸಿಗೆ ಸಮಾಧಾನ ನೀಡುವ ಅನುಭವ ಪಡೆದು, ವ್ಯವಹಾರ ವೃದ್ಧಿಸಿಕೊಳ್ಳಿ!!