ಮೂರು ದಶಕಗಳಕಾಲ ಯಲ್ಲಾಪುರ ತಾಲೂಕಿನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿ, ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟ ನಿವೃತ್ತ ಶಿಕ್ಷಕ, ತಾಲೂಕಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ ನಾಯಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಸೋಮವಾರ ಯಲ್ಲಾಪುರದಲ್ಲಿ ನಡೆಯಿತು.

ಪಟ್ಟಣದ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ದಿ.ಪ್ರಕಾಶ ನಾಯಕ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸಿ, ಮೌನಾಚರಣೆ ನಡೆಸಲಾಯಿತು. ದಿ.ಪ್ರಕಾಶ ನಾಯಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಪ್ರಕಾಶ ನಾಯಕ ಅವರು ಸಮಾಜಮುಖಿ ವ್ಯಕ್ತಿತ್ವದ, ಪರೋಪಕಾರಿ ಮನೋಭಾವನೆ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂದರು. ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ್ ಹೊಸ್ಕೇರಿ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ಟ,

ಪತ್ರಕರ್ತರಾದ ಜಿ.ಎನ್.ಭಟ್ ತಟ್ಟಿಗದ್ದೆ, ಸುಬ್ರಾಯ ಬಿದ್ರೇಮನೆ , ಪ್ರಮುಖರಾದ ಸಂತೋಷ ನಾಯ್ಕ, ಗಂಗಾಧರ ಪಟಗಾರ, ಮಾರುತಿ ನಾಯಕ, ವಿಶಾಲ ನಾಯ್ಕ, ದಿನೇಶ ಭಟ್ಟ, ಪವನಕುಮಾರ್, ವೇಣುಗೋಪಾಲ ಮದ್ಗುಣಿ, ಪ್ರಕಾಶ ನಾಯಕ ಅವರಿಗೆ ನುಡಿನಮನ ಸಲ್ಲಿಸಿದರು. ತಾಲೂಕಾ ಸರ್ಕಾರಿ ಸಂಘದ ಪದಾಧಿಕಾರಿಗಳು, ಶಿಕ್ಷಕರ ಸಂಗದ ಪದಾಧಿಕಾರಿಗಳು ಇದ್ದರು.

===========================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading