advertisements

ಯಲ್ಲಾಪುರ ಪಟ್ಟಣ ಮತ್ತು ಗ್ರಾಮಗಳಿಗೆ ಯೋಗ ತಲುಪಿ ಇಡೀ ಯಲ್ಲಾಪುರ ಯೋಗಮಯ ಆಗಬೇಕು ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ, ಯೋಗ ಗುರು ಭವರಲಾಲ್ ಆರ್ಯ ಹೇಳಿದರು.

ಯಲ್ಲಾಪುರ ಪಟ್ಟಣದ ವಿಶ್ವದರ್ಶನದ ಗಂಗಾಧರೆಂದ್ರ ಸರಸ್ವತೀ ಸಭಾಭವನದಲ್ಲಿ ಅಡ್ವಾನ್ಸ್ ಯೋಗ ಶಿಕ್ಷಣ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಯಲ್ಲಾಪುರ ಪಟ್ಟಣದ ಪ್ರತಿ ವಾರ್ಡ್ ನಲ್ಲಿ ಮತ್ತು ಪ್ರತಿಗ್ರಾಮದಲ್ಲಿ ಒಬ್ಬ ಯೋಗ ಶಿಕ್ಷಕರು ಇರಬೇಕು. ಅದರಿಂದ ಯಲ್ಲಾಪುರ ಯೋಗಮಯ ಮಾಡುವ ಗುರಿ ತಲುಪಲು ಸಾಧ್ಯ ಎಂದರು. ಯೋಗ ಕಲಿಸುವ ಶಿಕ್ಷಕರನ್ನು ಸಿದ್ಧಮಾಡುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ವಿಶ್ವದರ್ಶನ ಶಿಕ್ಷಣ ಸಮೂಹದಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ನೀಡಬೇಕು ಎನ್ನುವ ಚಿಂತನೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಯೋಗವನ್ನು ಕಲಿಸಲಾಗುತ್ತಿದೆ. ಅದರ ಜೊತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಯಲ್ಲಾಪುರದ ಯೊಗಾಸಕ್ತರಿಗೆ ಪ್ರತಿನಿತ್ಯ ಮುಂಜಾನೆ, ಸಾಯಂಕಾಲ ವಿಶ್ವದರ್ಶನದ ಸಭಾಭವನದಲ್ಲಿ ಯೋಗ ಕಲಿಕೆ ಶಿಬಿರವನ್ನು ನಿರಂತರವಾಗಿ ನಡೆಸುವ ಗುರಿ ಇದೆ ಎಂದು ಹೇಳಿದರು.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news

E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur

ನಮ್ಮ FACE BOOK GROUP JOIN ಆಗಿ https://www.facebook.com/groups/593852164946589

LATEST NEWS

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading