ರವಿವಾರ ಸಂಜೆ ಸ್ನೇಹಿತರೊಂದಿಗೆ ಬೇಡ್ತಿ ನದಿಯಲ್ಲಿ ಮೀನು ಹಿಡಿಯಲು ಹೋಗಿ ವಾಪಸ್ ಮನೆಗೆ ಬರುವಾಗ ಕವಲಗಿ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದ ಯಲ್ಲಾಪುರ ತಾಲೂಕಿನ ಮಾದನಸರದ ಇಬ್ಬರು ಯುವಕ ಪೈಕಿ ಒಬ್ಬನು ಮೃತಪಟ್ಟಿದ್ದು ಖಚಿತವಾಗಿದ್ದು ಶವ ಪತ್ತೆಯಾಗಿದೆ.

ಮಾದನಸರದ ರಫೀಕ್ ಇಬ್ರಾಹಿಂ ಸಾಬ್ ಸೈಯದ್ (27) ಹಾಗೂ ಈತನ ತಮ್ಮ ಮಹ್ಮದ್ ಹನೀಫ್ ಇಬ್ರಾಹಿಂ ಸೈಯದ್ (25) ಕವಲಗಿ ಹಳ್ಳದ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದರು. ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಈ ಸಹೋದರರನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ನಿರಂತರವಾಗಿ ಹುಡುಕಾಟ ನಡೆಸಿದ್ದರು.

ನೀರಿನಲ್ಲಿ ಮುಳುಗಿದ್ದ ಯುವಕರು

ಯುವಕರು ನೀರಿನಲ್ಲಿ ಮುಳುಗಿದ್ದ ಸ್ಥಳದಿಂದ 300 ಮೀಟರ್ ದೂರದಲ್ಲಿ ಸೋಮವಾರ ಮಧ್ಯಾಹ್ನ ಅಣ್ಣ ಮಹ್ಮದ್ ರಫೀಕ್ ಇಬ್ರಾಹಿಂ ಸಾಬ್ ಶವ ಪತ್ತೆಯಾಗಿದೆ. ಶವವನ್ನು ಮೇಲೆತ್ತಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಮಹ್ಮದ್ ಹನೀಫ್ ಈವರೆಗೂ ಪತ್ತೆಯಾಗಿಲ್ಲ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ರಮೇಶ ಹಾನಾಪುರ, ಪಿಎಸ್ಸೈಗಳಾದ ಯಲ್ಲಾಲಿಂಗ ಕುನ್ನೂರು, ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಗಳು ಭೇಟಿನೀಡಿ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇನ್ನೊಬ್ಬನ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news

E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur

ನಮ್ಮ FACE BOOK GROUP JOIN ಆಗಿ https://www.facebook.com/groups/593852164946589

LATEST NEWS

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading