ಯಲ್ಲಾಪುರ ಪಟ್ಟಣದ ನಾಯಕನಕೆರೆಯ ಶಾರದಾಂಬಾ ದೇವಾಲಯದ ಆವರಣದಲ್ಲಿರುವ ಮಾರುತಿ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಸೋಮವಾರ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮಾರುತಿ ದೇವರ ಸನ್ನಿಧಿಯಲ್ಲಿ ಲಘು ರುದ್ರ ಹವನ, ಮಾರುತಿ ಮೂಲ ಮಂತ್ರ ಜಪ, ಕದಳಿ ದ್ರವ್ಯದಲ್ಲಿ ಮಾರುತಿ ಮೂಲಮಂತ್ರಪೂರ್ವಕ ಹವನ, ಶಾರದಾಂಬಾ ಸನ್ನಿಧಿಯಲ್ಲಿ ಸಪ್ತಶತಿ ಪಾರಾಯಣ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದವು.

ಅರ್ಚಕ ವಿ.ಗೋಪಾಲಕೃಷ್ಣ ಭಟ್ಟ ಕುಂಕಿಪಾಲ ಧಾರ್ಮಿಕ ಕಾರ್ಯಕ್ರಮದ ಯಜಮಾನತ್ವ ವಹಿಸಿದ್ದರು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news

E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur

ನಮ್ಮ FACE BOOK GROUP JOIN ಆಗಿ https://www.facebook.com/groups/593852164946589

LATEST NEWS

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading