ಯಲ್ಲಾಪುರ ಪಟ್ಟಣದ ಮೂಲಕ ಹಾದುಹೋದ ರಾಷ್ಟ್ರೀಯ ಹೆದ್ದಾರಿ-63ರಲ್ಲಿ, ಅನೇಕ ಕಡೆ ಹೊಂಡ, ಗುಂಡಿಗಳಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.

ಹೆದ್ದಾರಿಯ ಹೊಂಡಗಳಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. ಇದೇ ಹೆದ್ದಾರಿಯ ಯಲ್ಲಾಪುರ ಪಟ್ಟಣದ ನಾಯಕನಕೆರೆಯಲ್ಲಿ ಅನೇಕ ದಿನಗಳಿಂದ ಬೃಹತ್ ಹೊಂಡಗಳಿಂದಾಗಿ ಜನರಿಗೆ ತೊಂದರೆಯಾಗುತ್ತಿತ್ತು.

ಹೆದ್ದಾರಿಯ ಈ ದುರವಸ್ಥೆಯಿಂದಾಗಿ ಕೆಲವು ಬೈಕ್ ಸವಾರರು ಬಿದ್ದು ಸಣ್ಣಪುಟ್ಟಗಾಯಗಳೊಂದಿಗೆ ಬಚಾವ್ ಆಗಿರುವುದನ್ನು ಹಾಗೂ ಈ ಹೊಂಡಗಳಿಂದ ಜನರಿಗೆ ಸಮಸ್ಯೆಯಾಗುತ್ತಿರುವುದನ್ನು ಅರಿತ ಸ್ಥಳೀಯ ಯುವಕರು, ಶನಿವಾರ ಶ್ರಮದಾನದ ಮೂಲಕ ಹೆದ್ದಾರಿ ಹೊಂಡಗಳನ್ನು ಮುಚ್ಚಿದ್ದಾರೆ. ಯುವಕರ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಗಣೇಶ ದೇವಾಡಿಗ, ಸಂತೋಷ ಬಾಂದೇಕರ್, ಮಿಲನ್ ಬಾಂದೇಕರ್, ಸಚಿನ್ ಶೆಟ್ಟಿ, ನಾರಾಯಣ ದೇವಾಡಿಗ, ವಿಜೇಂದ್ರ ಪಟಗಾರ, ವಿಶ್ವನಾಥ ದೇವಾಡಿಗ, ಜೀವನ್, ಸಂತೋಷ ಬಂಟ ಮುಂತಾದವರು ಹೆದ್ದಾರಿಯಲ್ಲಿನ ಗುಂಡಿಗಳನ್ನು ಸಿಮೆಂಟ್ ಹಾಕಿ ಮುಚ್ಚಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading