








23-8-2025 ಶನಿವಾರ ಯಲ್ಲಾಪುರ
ಹಿಂದೂ ವಿರೋಧಿಗಳ ಷಡ್ಯಂತ್ರ ಬಯಲಾಗಲಿ: ನಾಗರಿಕ ವೇದಿಕೆ ಆಗ್ರಹ

ಧರ್ಮಸ್ಥಳದಲ್ಲಿ ಧರ್ಮದ್ರೋಹಿಗಳ ಮುಖವಾಡ ಕಳಚಿ ಬಿದ್ದಿದೆ. ಸರಕಾರ ಈ ಮುಖವಾಡಗಳ ಮಾತು ನಂಬಿ SIT ರಚನೆ ಮಾಡಿತ್ತು. SIT ತನಿಖೆ ಹಾಗೂ ಕೆಲವು ಖಾಸಗಿ ಸುದ್ದಿವಾಹಿನಿಗಳ ಸಹಕಾರದಿಂದ ಧರ್ಮಸ್ಥಳದಲ್ಲಿ ಅಂತಹದ್ದೇನೂ ಆಗೇ ಇಲ್ಲ, ಇದೊಂದು ಷಡ್ಯಂತ್ರ ಎಂದು ಇಡೀ ದೇಶಕ್ಕೇ ಗೊತ್ತಾಯಿತು.
ಈ ಮುಸುಕುಧಾರಿಗಳ ಮುಖವಾಡ ಕಳಚಿಬಿದ್ದಂತೆ, ಹಿಂದೂ ವಿರೋಧಿಗಳ ಷಡ್ಯಂತ್ರಗಳನ್ನು ಬಯಲು ಮಾಡಬೇಕು ಎಂದು ನಾಗರಿಕ ವೇದಿಕೆಯ ಅಧ್ಯಕ್ಷ, ಬಿಜೆಪಿ ಮುಖಂಡ ರಾಮು ನಾಯ್ಕ ಆಗ್ರಹಿಸಿದ್ದಾರೆ.

ರಾಮು ನಾಯ್ಕ
ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಷ್ಟ್ರಮಟ್ಟದ ಹಿಂದು ವಿರೋಧಿ ಗ್ಯಾಂಗ್ ಬಯಲಿಗೆ ಬರಬೇಕಾದರೆ, ಸರಕಾರ ಇನ್ನೊಂದು SIT ಯನ್ನು ರಚನೆ ಮಾಡಲೇಬೇಕೆಂದು ಆಗ್ರಹಿಸುತ್ತೇನೆ.
ರಾಜ್ಯ ಸರಕಾರಕ್ಕೆ ಹಾಗೂ ತನಿಖಾ ತಂಡಕ್ಕೆ ಅಭಿನಂದನೆಗಳು. ಆದರೆ ಇಷ್ಟಕ್ಕೇ ಮುಗಿಯುವುದಿಲ್ಲ ಇವರ ಜವಾಬ್ಧಾರಿ. ಈ ಮುಸುಕುಧಾರಿಗಳ ಮುಖವಾಡ ಕಳಚಿಬಿದ್ದಂತೆ, ಇವರುಗಳ ಹಿಂದೆ ಬೆಂಗಾವಲಾಗಿ ನಿಂತವರ ಮತ್ತು ರಾಷ್ಟ್ರಮಟ್ಟದ ಹಿಂದು ವಿರೋಧಿ ಗ್ಯಾಂಗ್ ಇವರೆಲ್ಲರೂ ಬಯಲಿಗೆ ಬರಬೇಕಾಗಿದೆ ಎಂದು ರಾಮು ನಾಯ್ಕ ಹೇಳಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS





















