ಯೋಗಾಭ್ಯಾಸದ ಆರಂಭ ಆಗಿದೆ. ಅದು ನಿರಂತರವಾಗಿ ನಡೆಯಬೇಕು ಎಂಬುದೇ ಅಡ್ವಾನ್ಸ್ ಯೋಗ ಶಿಕ್ಷಕ ತರಬೇತಿಯ ಉದ್ದೇಶ .ಇಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರು ಒಂದೊಂದು ಯೋಗ ತರಬೇತಿ ನಡೆಸುವಂತಾಗಬೇಕು. ಯಲ್ಲಾಪುರದ ಪ್ರತಿ ಗ್ರಾಮಕ್ಕೆ ಯೋಗ ತಲುಪಬೇಕು ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಪಟ್ಟಣದ ವಿಶ್ವದರ್ಶನ ವಿದ್ಯಾಲಯದ ಸಭಾಭವನದಲ್ಲಿ ರವಿವಾರ ಯೋಗ ಶಿಬಿರದ ಮುಕ್ತಾಯದ ಸಮಾರಂಭದಲ್ಲಿ ಪತಂಜಲಿ ಯೋಗಪೀಠ ಹರಿದ್ವಾರ ಹಾಗೂ ಆಯುಷ್ ಇಲಾಖೆ ಭಾರತ ಸರಕಾರ ಕೊಡಮಾಡುವ ರಾಜ್ಯಮಟ್ಟದ ಸಮಾಜಸೇವಾರತ್ನ ಪುರಸ್ಕಾರ ಗೌರವವನ್ನು ಸ್ವೀಕರಿಸಿ ಮಾತನಾಡಿದರು.
ಪತಂಜಲಿಯ ಯೋಗ ಸಮಿತಿ ಕರ್ನಾಟಕದ ರಾಜ್ಯ ಕೃಷಿ ಪ್ರಭಾರಿ ಸಂಜಯ ಕುಸ್ತಿಗಾರ ಮಾತನಾಡಿ, ಯಲ್ಲಾಪುರದಲ್ಲಿ ಯೋಗ ಉತ್ಸವ ನಡೆದಿದೆ. ಇದು ನಿರಂತರವಾಗಿ ಸಾಗಲಿ ಎಂದರು. ಪತಂಜಲಿ ಸಮಿತಿಯ ಉತ್ತರ ಕರ್ನಾಟಕ ಪ್ರಭಾರಿ ಕಿರಣ ಮನ್ಹೋಳ್ಕರ್ ಅವರು ವಿಶೇಷವಾಗಿ ಅಗ್ನಿಹೋತ್ರ ಹೋಮ ನಡೆಸಿ ನಿತ್ಯವೂ ನಕಾರಾತ್ಮಕ ವಾತಾವರಣ ತೊಲಗಿಸಲು ಅಗ್ನಿಹೋತ್ರ ಮಾಡೋಣ ಎಂದರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಅಡ್ವಾನ್ಸ್ ಯೋಗ ಶಿಬಿರದ ಸಂಯೋಜಕ ಬಾಲಕೃಷ್ಣ ಕೋಳೆಕರ, ಜಿಲ್ಲಾ ಕಾರ್ಯದರ್ಶಿ ನಾಗೇಂದ್ರ ಭಟ್ ಗೋಕರ್ಣ, ಜಿಲ್ಲಾ ಪ್ರಭಾರಿ ರಘುರಾಮ ಹೆಗಡೆ, ಹುಬ್ಬಳ್ಳಿಯ ಕೇಂದ್ರ ಕಚೇರಿಯ ಮುಖ್ಯಸ್ಥ ದೇವೇಂದ್ರ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ, ತಾಲೂಕಾ ಮಹಿಳಾ ಪ್ರಭಾರಿ ಶೈಲಾ ಭಟ್ಟ, ಅನುಸೂಯಾ ಮುದ್ದೇಪಾಲ್ ಉಪಸ್ಥಿತರಿದ್ದರು.
ಪತಂಜಲಿಯ ಸಮಿತಿಯ ತಾಲೂಕಾ ಅಧ್ಯಕ್ಷ ವಿ.ಕೆ.ಭಟ್ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗ ಸಮಿತಿಯ ಕರ್ನಾಟಕ ರಾಜ್ಯ ಪ್ರಭಾರಿ ಶ್ರೀ ಭವರಲಾಲ್ ಆರ್ಯ ಅವರು ಧ್ವನಿಸುರುಳಿಯ ಮೂಲಕ ಸಂದೇಶ ಕಳುಹಿಸಿ, ಯಲ್ಲಾಪುರದ ಪ್ರತಿ ವಾರ್ಡ್ ಅಲ್ಲಿ ಯೋಗ ಶಿಬಿರ ನಡೆಯಬೇಕು. ತಿಂಗಳಿಗೊಂದು ಸತ್ಸಂಗ ಆಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.