ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯು ಸಕಲ ವೇದವೇದಾಂತಗಳ ಸಾರಸ್ವರೂಪವಾಗಿದೆ. ವೇದಗಳು ಭಗವಂತನ ವಾಣಿಯಾಗಿದ್ದು, ಭಗವದ್ಗೀತೆಯೂ ವೇದತುಲ್ಯವಾಗಿದೆ. ವೇದ ಮತ್ತು ಭಗವದ್ಗೀತೆ ಎರಡೂ ಭಗವಂತನಿಂದಲೇ ಉಂಟಾದವುಗಳು ಎಂದು ನಿವೃತ್ತ ವೇದಾಂತ ಶಾಸ್ತ್ರದ ಪ್ರಾಧ್ಯಾಪಕ ಡಾ. ಶಂಕರ ಭಟ್ಟ ಬಾಲೀಗದ್ದೆ ಹೇಳಿದರು.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ಪರಿಷತ್ತಿನ ವಸತಿಶಾಲೆಯಿಲ್ಲಿ ನಡೆದ ಭಾಷಾ-ಸಾರಸ್ವತ 2025-26 ಎಂಬ ಎರಡು ದಿನಗಳ ವಿಶೇಷ ಕಾರ್ಯಕ್ರಮದಲ್ಲಿ ಅವರು, ಉಪನ್ಯಾಸಕರಾಗಿ ಭಾಗವಹಿಸಿ, “ಸುಗಮ ಜೀವನಕ್ಕೆ ಸೋಪಾನ ಭಗವದ್ಗೀತೆ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ನೀಡಿದರು.

ನಾಡಿನ ಅನೇಕ ವಿದ್ವಾಂಸರು ವಿವಿಧ ಗೋಷ್ಠಿಗಳಲ್ಲಿ ಮತ್ತು ಅಷ್ಟಾವಧಾನದಲ್ಲಿ ಪಾಲ್ಗೊಂಡಿದ್ದರು. ಅಷ್ಟಾವಧಾನದ ಪೃಚ್ಛಕರಾಗಿಯೂ ಡಾ.ಶಂಕರ ಭಟ್ಟ ಬಾಲಿಗದ್ದೆ ಭಾಗವಹಿಸಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading