ಮನೆಯ ಬಾಗಿಲಿನ ಚಿಲಕವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ, ಕಪಾಟಿನ ಒಳಗಿದ್ದ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿದ್ದ ಆರೋಪಿನ್ನು ಬಂಧಿಸುವಲ್ಲಿ ಕಾರವಾರ ಚಿತ್ತಾಕುಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಆ.7ರಂದು ಕಾರವಾರ ತಾಲೂಕಿನ ಮಾಜಾಳಿಯ ಗಾಬಿತವಾಡದಲ್ಲಿ ಮನೆಯ ಮುಖ್ಯ ಬಾಗಿಲಿನ ಚೀಲಕವನ್ನು ತೆಗೆದು ಒಳಗೆ ಪ್ರವೇಶಿಸಿದ ಕಳ್ಳರು, ಬಳಿಕ ದೇವರ ಕೊಣೆಯಲ್ಲಿದ್ದ ಕಬ್ಬಿಣದ ಅಲೆಮಾರಿನ ಲಾಕರ್‍ನ್ನು ಒಡೆದು, ಅದರಲ್ಲಿ ಇಟ್ಟಿದ್ದ ಬಂಗಾರದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಆರೋಪಿ ರಮೇಶ ಮಹದೇವ ಮೇಥಾರನನ್ನು ಬಂಧಿಸಿ, 4,80,000 ರೂ ಮೌಲ್ಯದ 48 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.

ದೇವಾಲಯದ ಬಗಿಲಿನ ಚಿಲಕವನ್ನು ಮುರಿದು ಒಳಗೆ ಪ್ರವೇಶಿಸಿ ಹುಂಡಿಯಿಂದ ಹಣವನ್ನು ಕಳ್ಳತನ ಮಾಡಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಶ್ರೀ ಅರಿಕಲ್ ಜಟಕೇಶ್ವರ ದೇವಾಲಯ ಹಾಗೂ ಶ್ರೀ ಶೇಡಬರಡಜಟಿಕಾ ಮಹಾಸತಿ ದಲ್ಲಿ ಸೆಪ್ಟೆಂಬರ್ 14ರ ರಾತ್ರಿ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಆರೋಪಿಗಳು ಕದ್ದೊಯ್ದಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿರಾಲಿಯ ಅಮೀರ್ ಹಸನ್ ಬ್ಯಾರಿ ಹಾಗೂ ಭಟ್ಕಳದ ಮೊಹಮ್ಮದ್ ಇಮ್ರಾನ್ ಅಬ್ದುಲ್ ಗಫಾರ ಎಂಬುವವರನ್ನು ಬಂದಿಸಲಾಗಿದೆ. ಕಳ್ಳತನ ಕೃತ್ಯಕ್ಕೆ ಬಳಸಲಾದ ಎರಡು ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

ಪೆಟ್ರೋಲ್ ಪಂಪ್ ಆವರಣದ ಗೋಡೆಯ ಹತ್ತಿರ ನಿಲ್ಲಿಸಿಟ್ಟ ಬೈಕ್ ಅನ್ನು ಕಳ್ಳತನ ಮಾಡಿದ ಆರೋಪಿಯನ್ನು ಪತ್ತೆಹಚ್ಚಿದ ಪೋಲೀಸರು, ಕಳುವಾದ ಬೈಕ್ ಅನ್ನು ವಶಕ್ಕೆ ಪಡೆದ ಘಟನೆ ಅಂಕೋಲಾದಲ್ಲಿ ನಡೆದಿದೆ.

ಸೆ.3ರಂದು ಪಟ್ಟಣದಲ್ಲಿ ಶಿರಕುಳಿಯ ನಾಗರಾಜ ನಾಯ್ಕ ಅವರ ಹಿರೋಹೊಂಡಾ ಬೈಕ್ ಕಳ್ಳತನವಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಆರೋಪಿಯಾದ ಕಾರವಾರ ಕೋಡಿಭಾಗದ ಅಳವೆವಾಡ ನಿವಾಸಿ ಅಮಿತ ಮುಕ್ತು ಬಂಢಾರಿಯನ್ನು ಬಂಧಿಸಿದ್ದು, ಕಳ್ಳತನವಾದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading