ವೀಳ್ಯದೆಲೆ ತರಲು ತಮ್ಮ ತೋಟಕ್ಕೆ ಹೋಗಿದ್ದ ವೃದ್ಧರೊಬ್ಬರು ಅಡಿಕೆ ಮರಕ್ಕೆ ಏಣಿ ಹಾಕಿ ಮರ ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಅಡಿಕೆ ಮರದ ಪಕ್ಕದಲ್ಲಿ ಇದ್ದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಬಾಸಲ ಸಮೀಪ ವಾಗಳ್ಳಿಯಲ್ಲಿ ಗುರುವಾರ ನಡೆದಿದೆ.

ವಾಗಳ್ಳಿಯ ನಿವಾಸಿ, 96 ವರ್ಷದ ಗಣಪತಿ ತಂದೆ ಶಿವರಾಮ ಗಾಂವ್ಕಾರ್ ಎಂಬುವವರು ಗುರುವಾರ ಬೆಳಿಗ್ಗೆ 6.30ರಿಂದ 8.30ರ ನಡುವಿನ ಅವಧಿಯಲ್ಲಿ ತಮ್ಮ ತೋಟಕ್ಕೆ ವೀಳ್ಯದೆಲೆ ತರಲು ಹೋದವರು, ವೀಳ್ಯದೆಲೆ ಕೊಯ್ಯಲೆಂದು ಏಣಿಯ ಮೂಲಕ ಅಡಿಕೆ ಮರವನ್ನು ಹತ್ತುತ್ತಿರುವಾಗ ಆಯತಪ್ಪಿ ಆಕಸ್ಮಿಕವಾಗಿ, ಕಾಲು ಜಾರಿ ಅಡಿಕೆ ಮರದ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ಸಾವಿನ ಬಗ್ಗೆ ನಮಗೆ ಯಾವುದೇ ಸಂಶಯ ಇಲ್ಲ ಎಂದು ಮೃತರ ಪುತ್ರ ಚಂದ್ರಶೇಖರ ಗಣಪತಿ ಗಾಂವ್ಕಾರ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading