ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪಟ್ಟಣದ ಅಡಿಕೆ ಭವನದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ MJF ಶೇಷಗಿರಿ ಪ್ರಭು ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್ಕಾರ್ಯ ಮಾಡುತ್ತಾರೆ. ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಲಯನ್ಸ್ ಕ್ಲಬ್ ಪ್ರಮುಖರು

ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯಕ, ಮಾಜಿ ಝೋನಲ್ ಚೇರ್ಮೆನ್ ಸಯ್ಯದ್ ತಂಗಳ ಪಾಲ್ಗೊಂಡಿದ್ದರು. ಲಯನ್ಸ್ ಕ್ಲಬ್ ಸದಸ್ಯರಾದ ನಂದನ ಬಾಳಗಿ, ಗೋಪಾಲ ನೇತ್ರೇಕರ್, ಮಹೇಶ ಗೌಳಿ, ಶಾಂತಾರಾಂ ಹೆಗಡೆ, ನಾಗರಾಜ ನಾಯ್ಕ, ಮೋಹನ ನಾಯ್ಕ, ಶ್ರೀಧರ ಶೆಟ್ಟಿ, ಕಿರಣ ಶೆಟ್ಟಿ, ಎಸ್.ಎನ್.ನಾಯ್ಕ, ಮುಂತಾದವರು ಇದ್ದರು.

ಸುನಂದಾ ಪಾಠಣಕರ ಪ್ರಾರ್ಥಿಸಿದರು. ವಿನಯಾ ಪ್ರಭು, ರವಿರಾಜ ಪ್ರಭು ಪರಿಚಯಿಸಿದರು. ಎಸ್.ಎಲ್.ಭಟ್ಟ ಹಾಗೂ ಮಂಜುನಾಥ ನಾಯ್ಕ ನಿರ್ವಹಿಸಿದರು. ಶಿಕ್ಷಕರಾದ ಶೋಭಾ ನಾಯ್ಕ, ತನುಜಾ ದೇವಡಿಗ, ಮಾರುತಿ ಆಚಾರಿ, ಸುಬ್ರಾಯ ಭಟ್ಟ, ಗಜಾನನ ಭಟ್ಟ ಅವರನ್ನು ಸನ್ಮಾನಿಸಲಾಯಿತು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading