ಶಕ್ತಿದೇವತೆಯ ಆರಾಧನೆಯ ಪುಣ್ಯ ಪರ್ವಕಾಲವಾದ ಶರನ್ನವರಾತ್ರಿ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸೋಮವಾರದಿಂದ ಶರನ್ನವರಾತ್ರಿ ಆಚರಣೆ ಆರಂಭವಾಗಿದ್ದು, ವಿವಿಧ ದೇವಾಲಯಗಳಲ್ಲಿ ಪೂಜೆ, ಆರಾಧನೆಗಳು ನಡೆಯುತ್ತಿದ್ದು, ಸಂಭ್ರಮ ಕಳೆಗಟ್ಟಿದೆ.

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನವರಾತ್ರಿ ಉತ್ಸವ ಸೊಮವಾರದಿಂದ ಆರಂಭವಾಯಿತು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅಮೃತ ಹಸ್ತಗಳಿಂದ ಶ್ರೀಚಕ್ರಾರ್ಚನೆ ಪೂಜೆಯು ನೆರವೇರಿತು.

ಒಂಭತ್ತು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳೊಂದಿಗೆ ನವರಾತ್ರಿ ವ್ರತವನ್ನು ಆಚರಿಸಲಾಗುತ್ತದೆ. ಪರಮ ಪೂಜ್ಯ ಉಭಯ ಶ್ರೀ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಬೆಳಿಗ್ಗೆ ಮಹಾಸಂಕಲ್ಪದೊಂದಿಗೆ ಶರನ್ನವರಾತ್ರಿ ಉತ್ಸವವು ಆರಂಭಗೊಂಡಿತು.

ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ಸೋಮವಾರ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕವಡಿಕೆರೆಯ ದುರ್ಗಾಂಬಾ ದೇವರಿಗೆ ಸೋಮವಾರ ವಿಶೇಷ ಅಲಂಕಾರ ಮಾಡಿರುವುದು.

ಯಲ್ಲಾಪುರ ಪಟ್ಟಣದ ಕಾಳಮ್ಮದೇವಾಲಯದಲ್ಲಿ ಶ್ರೀದೇವರಿಗೆ ಪುಜೆ ಸಲ್ಲಿಸಲಾಯಿತು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading