ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಬೈಕ್, ಸವಾರನ ನಿಯಂತ್ರಣ ತಪ್ಪಿ KSRTC ಬಸ್ಸಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ ಸವಾರನಿಗೆ ಹಾಗೂ ಬೈಕ್ ಹಿಂದೆ ಕುಳಿತಿದ್ದ ವ್ಯಕ್ತಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಆರತಿಬೈಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಆರೋಪಿ ಬೈಕ್ ಸವಾರ ನಾಗರಾಜ ತಂದೆ ಬಾಬು ನಾಯ್ಕ ತನ್ನ ಬೈಕ್ ಅನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಹೋಗಿ, ಇಂಡಿಕೇಟರ್ ಹಾಕದೇ ಆರತಿಬೈಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಮ್ಮೆಲೇ ತನ್ನ ಬಲಕ್ಕೆ ಪಂಕ್ಚರ್ ಅಂಗಡಿ ಕಡೆಗೆ ಬೈಕ್ ಚಲಾಯಿಸುತ್ತಿದ್ದಾಗ,

ಅದೇ ಸಂದರ್ಭಕ್ಕೆ ಹಿಂದೆ ಬಂದ ಅಂಕೋಲಾ ಕಡೆ ಹೋಗುತ್ತಿದ್ದ ಬಸ್ಸಿಗೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರನ ಮುಖಕ್ಕೆ ಹಾಗೂ ಎದೆಗೆ ಗಾಯವಾಗಿದೆ. ಬೈಕ್ ಹಿಂಬದಿ ಕುಳಿತಿದ್ದ ಸಹಸವಾರನ ತೊಡೆಗೆ ಗಾಯವಾಗಿದೆ. ಈ ಕುರಿತು ಭಟ್ಕಳ ಘಟಕದ ಬಸ್ ನಿರ್ವಾಹಕ ಗೊಲ್ಲಾಳಪ್ಪ ದೇವರಮನಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರನ ವಿರುದ್ಧ ದೂರು ದಾಖಲಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading