ಗುರುವಾರ ಯಲ್ಲಾಪುರದಲ್ಲಿ ಬಿಗ್ ಮಿಶ್ರಾ ಪೇಡಾ ನೂತನ ಮಳಿಗೆ ಆರಂಭ
ಬಾಯಲ್ಲಿ ನೀರೂರಿಸುವ ರುಚಿ ಹಾಗೂ ಮನಸ್ಸಿಗೆ ಮುದ ನೀಡುವ ಪಾರಂಪರಿಕ ಸ್ವಾದಿಷ್ಟ ಸವಿಗೆ ದೇಶಾದ್ಯಂತ ಅತ್ಯುತ್ತಮ ಹೆಸರು ಪಡೆದ ಧಾರವಾಡ ಬಿಗ್ ಮಿಶ್ರಾ ಪೇಡಾ ಮಳಿಗೆಯು ಯಲ್ಲಾಪುರದಲ್ಲಿ ನೂತನವಾಗಿ ಗುರುವಾರ ಆರಂಭವಾಗಲಿದೆ.
ಅನೇಕ ವರ್ಷಗಳಿಂದ ಹಲವು ಮಹಾ ನಗರಗಳಲ್ಲಿ, ಪೇಟೆ,ಪಟ್ಟಣಗಳಲ್ಲಿ ಉತ್ತಮ ಸೇವೆಗೆ ಹೆಸರಾಗಿ ಗ್ರಾಹಕರ ಮನ ಗೆದ್ದಿರುವ ಬಿಗ್ ಮಿಶ್ರಾ ಪೇಡಾ ಮಳಿಗೆಯು ಈಗ ಯಲ್ಲಾಪುರದಲ್ಲಿ ಸೇವೆಯನ್ನು ಆರಂಭಿಸಲಿದೆ. ಯಲ್ಲಾಪುರ ಪಟ್ಟಣದ ಹುಬ್ಬಳ್ಳಿ ರಸ್ತೆಯ ವೆಂಕಟ್ರಮಣ ದೇವಾಲಯದ ಸಮೀಪ ಅನ್ನಪೂರ್ಣಾ ಕಿರಾಣಿ ಸ್ಟೋರ್ಸ್ ಸಮೀಪ ಅನ್ನಪೂರ್ಣಾ ವೆಂಚರ್ ನಲ್ಲಿ ಹೊಸ ಮಳಿಗೆಯು ಅ.2ರಂದು ವಿಜಯ ದಶಮಿಯ ಶುಭ ಸಂದರ್ಭದಲ್ಲಿ ಆರಂಭವಾಗಲಿದೆ.
ಈ ಮಳಿಗೆಯಲ್ಲಿಹೆಸರಾಂತ ಬಿಗ್ ಮಿಶ್ರಾ ಪೇಡಾ ಸಂಸ್ಥೆಯ ಉತ್ಪನ್ನಗಳು ಹಾಗೂ ಎಲ್ಲ ಬಗೆಯ ಸಿಹಿ ತಿನಿಸುಗಳು, ಅಪರೂಪದ ಹಲವು ತಿಂಡಿ, ತಿನಿಸುಗಳು ಲಭ್ಯವಾಗಲಿವೆ. ಆಧುನಿಕ, ಸುಸಜ್ಜಿತ ಮಳಿಗೆಯಲ್ಲಿ ಕೈಗೆಟಕುವ ದರದಲ್ಲಿ ಮಿಶ್ರಾ ಪೇಡಾ ಉತ್ಪನ್ನಗಳು ಇಲ್ಲಿ ಸಿಗುತ್ತವೆ.
ದಿನ ನಿತ್ಯ ಅಗತ್ಯ ಇರುವ ಸಿಹಿ ತಿಂಡಿಗಳು, ಮದುವೆ, ಮುಂಜಿ, ಗೃಹಪ್ರವೇಶ ಮುಂತಾದ ಎಲ್ಲ ಮಂಗಲ ಕಾರ್ಯಗಳಿಗೆ ಅಗತ್ಯ ಇರುವ ಸಿಹಿ ತಿನಿಸುಗಳು ಇಲ್ಲಿ ಲಭ್ಯ ಇವೆ. ಕುಟುಂಬದವರ ಜೊತೆ, ಸ್ನೇಹಿತರ ಜೊತೆ ವೈವಿಧ್ಯಮಯ ಸಿಹಿ ತಿಂಡಿಗಳನ್ನು ನಾನಾ ತಿನಿಸುಗಳನ್ನು ತಿಂದು ಸಂಭ್ರಮಿಸಲು ಬಿಗ್ ಮಿಶ್ರಾ ಪೇಡಾ ಮಳಿಗೆಯು ಉತ್ತಮ ಆಯ್ಕೆಯಾಗಿದೆ.
ಬಿಗ್ ಮಿಶ್ರಾ ಪೇಡಾ ಮಳಿಗೆಯ ಪ್ರಾರಂಭೋತ್ಸವಕ್ಕೆ ಆಗಮಿಸಬೇಕು ಮತ್ತು ಈ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅನ್ನಪೂರ್ಣಾ ವೆಂಚರ್ ನ ನಂದನ ಬಾಳಗಿ ಹಾಗೂ ಕುಟುಂಬದವರು ಕೋರಿದ್ದಾರೆ.