ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ.ಎಸ್.ಎಲ್.ಭೈರಪ್ಪನವರ ಕುರಿತು ಉಪನ್ಯಾಸ ಹಾಗೂ ನುಡಿನಮನ ಕಾರ್ಯಕ್ರಮವು ಸೋಮವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆಯಿತು.

ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಡಾ.ಭೈರಪ್ಪನವರ ಜೀವನ, ಸಾಧನೆ ಹಾಗೂ ಬರಹಗಳ ಕುರಿತು ಮಾತನಾಡಿದರು.

ಬಿಸಗೋಡ ಪ್ರೌಢ ಶಾಲೆಯ ಶಿಕ್ಷಕ ಶ್ರೀಧರ ಹೆಗಡೆ ಡಾ.ಭೈರಪ್ಪನವರ ಬದುಕು, ಬರಹದ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಜಿ.ಆರ್.ಹೆಗಡೆ ಕುಂಬ್ರಿಗುಡ್ಡೆ, ಪತ್ರಕರ್ತ ನಾಗರಾಜ ಮದ್ಗುಣಿ ಪಾಲ್ಗೊಂಡಿದ್ದರು.

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಜಿ.ಎನ್.ಭಟ್ ತಟ್ಟಿಗದ್ದೆ ಸ್ವಾಗತಿಸಿದರು. ಸಂಜೀವ ಹೊಸಕೇರಿ ನಿರ್ವಹಿಸಿದರು. ಕ.ಸಾ.ಪ.ಸದಸ್ಯ ಸುರೇಶ ಬೋರ್ಕರ್ ವಂದಿಸಿದರು. ಕ.ಸಾ.ಪ.ಸದಸ್ಯರಾದ ಸುನಂದಾ ಪಾಟಣಕರ, ಉಪನ್ಯಾಸಕ ರವಿ ಶೇಷಗಿರಿ ಮುಂತಾದವರು ಪಾಲ್ಗೊಂಡಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading