ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ಹಾಗೂ ಶಿರಸಿ ಲಯನ್ಸ್ ಕ್ಲಬ್ ವತಿಯಿಂದ ಜಂಟಿಯಾಗಿ ಲಯನ್ಸ್ ಕ್ಲಬ್ ಗಳ ಕಾರ್ಯಚಟುವಟಿಕೆಗಳ ಪರಿಶೀಲನಾ ಸಭೆ ಶಿರಸಿಯಲ್ಲಿ ನಡೆಯಿತು. ಎರಡೂ ಲಯನ್ಸ್ ಕ್ಲಬ್ ಗಳ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೈಗೊಂಡ ಸಮಾಜಮುಖಿ ಕಾರ್ಯಚಟುವಟಿಕೆಗಳ ಪರೀಶೀಲನೆ ನಡೆಸಲಾಯಿತು.

ಸಭೆಯಲ್ಲಿ ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ MJF ಶೇಷಗಿರಿ ಪ್ರಭು, ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ MJF ಗುರುರಾಜ ಹೊನ್ನಾವರ, ಯಲ್ಲಾಪುರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮೋಹನ ರೇವಣ್ಕರ್, ಖಜಾಂಚಿ ರವಿರಾಜ ಪ್ರಭು, ವಲಯ ಅಧ್ಯಕ್ಷ ಸುರೇಶ ಬೋರ್ಕರ್, ಸದಸ್ಯರಾದ ಸುನಂದಾ ಪಾಟಣಕರ್, ಶಿರಸಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮನೋಹರ ಮಲ್ಮನೆ, ಖಜಾಂಚಿ ಪ್ರಕಾಶ ಹೆಗಡೆ, ಪ್ರಮುಖರಾದ ಅಶೋಕ ಹೆಗಡೆ, ಎಂ.ಐ.ಹೆಗಡೆ, ಜ್ಯೋತಿ ಭಟ್ಟ, ವಿಮಯ ಹೆಗಡೆ ಮುಂತಾದವರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading