ಯಲ್ಲಾಪುರ ಪಟ್ಟಣದ ಗಾಂಧಿಕುಟೀರದಲ್ಲಿ ನಡೆಯುತ್ತಿರುವ 39 ನೇ ವರ್ಷದ ಸಂಕಲ್ಪ ಉತ್ಸವದಲ್ಲಿ ಸೋಮವಾರ ಸಂಜೆ ಸ್ಥಳೀಯ ಮಾತೆಯರು ಹಾಗೂ ಮಕ್ಕಳು ಪ್ರಸ್ತುತಪಡಿಸಿದ ಅವ್ವ ನಾಟಕ ಪ್ರದರ್ಶನ ಅತ್ಯಂತ ಮನೋಜ್ಞವಾಗಿ ಮೂಡಿಬಂತು. ಡಿ.ಎನ್.ಗಾಂವ್ಕಾರ್ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕ ಪ್ರೇಕ್ಷಕರಿಗೆ ಮುದ ನೀಡಿತು.

ನಾಟಕದ ಪ್ರತೀ ಸನ್ನಿವೇಶಕ್ಕೂ ಪ್ರೇಕ್ಷಕರು ಕರತಾಡನದೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬಾರದೆಂಬ ನಾಣ್ನುಡಿಯ ಸಂದೇಶ ನೀಡುವ ಕಥಾ ಹಂದರದ ಈ ನಾಟಕ ಮೊದಲ ಪ್ರದರ್ಶನಲ್ಲಿಯೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಕುಡುಕ ಗಂಡನೊಂದಿಗೆ ಬಡತನದ, ಕಷ್ಟದ ಬದುಕು ಸಾಗಿಸುತ್ತಿದ್ದ, ಮಹಿಳೆಯೊಬ್ಬಳು ತನ್ನ ಮಗನನ್ನು ಕಷ್ಟಪಟ್ಟು ಓದಿಸಿ ವಿದ್ಯಾವಂತನನ್ನಾಗಿ ಮಾಡಿದ ನಂತರ ಮಗನು ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ತಾಯಿಯಿಂದ ದೂರಾದ ಸನ್ನಿವೇಶದೊಂದಿಗೆ ಪ್ರದರ್ಶನಗೊಂಡ ನಾಟಕವು, ನಂತರದ ಭಾಗದಲ್ಲಿ ಸಾಕಿ ಸಲುಹಿದ ತಾಯಿಯನ್ನೇ ದೂರ ಮಾಡಿದ ಮಗನು, ಕಿಡ್ನಿ ವೈಫಲ್ಯದ ಖಾಯಿಲೆಗೊಳಗಾಗುವುದು, ಪ್ರೀತಿಸಿದ ಪತ್ನಿ ಈತನಿಂದ ದೂರವಾಗುವುದು, ನಾಟಕದ ಕೊನೆಯ ಸನ್ನಿವೇಶದಲ್ಲಿ ಮಗನಿಗೆ ಕಿಡ್ನಿಯನ್ನು ಕೊಟ್ಟ ತ್ಯಾಗಮಯೀ ತಾಯಿಯು ಮೃತಪಟ್ಟ ಮನಕಲಕುವ ದೃಶ್ಯದೊಂದಿಗೆ ದುಃಖಾಂತ್ಯವಾದ ನಾಟಕ ಪ್ರೇಕ್ಷಕರ ಮನದಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂತಾಯಿತು.

ನಾಟಕದಲ್ಲಿ ಕುಮಾರನಾಗಿ ಯಶಸ್ ಭಾಗವತ್, ಆಶಾ ರವೀಂದ್ರ ಭಗನಗದ್ದೆ, ತಾಯಿಯ ಪಾತ್ರದಲ್ಲಿ ಸರೋಜಾ ಪುಶಾಂತ್ ಹೆಗಡೆ, ಯಂಕ ಮತ್ತು ರವಿಯ ಪಾತ್ರದಲ್ಲಿ ರಚನಾ ರವೀಂದ್ರ ಹೆಗಡೆ, ಪರಿಮಳ ಪಾತ್ರದಲ್ಲಿ ಸಂಧ್ಯಾ ಶಾಂತಾರಾಮ ಹೆಗಡೆ, ಗೆಳತಿಯರ ಪಾತ್ರದಲ್ಲಿ ಮಮತಾ ಪ್ರಕಾಶ್ ಭಟ್, ಸುಮಂಗಲ ಶ್ರೀಪಾದ ಭಟ್, ಡಾಕ್ಟರ್ ಪಾತ್ರದಲ್ಲಿ ಆಶಾ ಕೃಷ್ಣ ಪಟೇಲ್,

ಮಕ್ಕಳಾಗಿ ಶ್ರೇಯಸ್ ಭಟ್, ಅಭಿರಾಮ ಹೆಗಡೆ, ಸಾಕೇತ್ ಭಟ್, ಆರ್ಯನ್ ಇನಾಮ್ದಾರ್, ಪ್ರಣತಿ ಹೆಗಡೆ, ಆಧ್ಯಾ ಪಟೇಲ್, ಸುಮೇಧಾ ಭಟ್, ಅಪೇಕ್ಷಾ ಭಟ್, ಪ್ರಗತಿ ನಾಯಕ್, ವೈಷ್ಣವಿ ಕಲ್ಬುರ್ಗಿ, ಗಹನ್ ಪರಂಗಿ ಪಾತ್ರ ನಿರ್ವಹಿಸಿದರು.

ಹಿನ್ನೆಲೆ ಸಂಗೀತದಲ್ಲಿ ಪ್ರವೀಣ ಇನಾಮ್ದಾರ್, ಹಿನ್ನೆಲೆ ಗಾಯನದಲ್ಲಿ ಗಂಗಾ ಭಟ್ಟ, ಸಾನ್ವಿ ಇನಾಮ್ದಾರ್ ಪಾಲ್ಗೊಂಡಿದ್ದರು. ಜಿ.ವಿ.ಭಟ್ಟ, ಸಣ್ಣಪ್ಪ ಭಾಗವತ್ , ಗಾಯತ್ರಿ ಬೋಳಗುಡ್ಡೆ ಸಹಕರಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading